ಬುಧವಾರ, ಮೇ 18, 2022
23 °C

ಹುಕ್ಕಾ ಬಾರ್‌ ಮೇಲೆ ದಾಳಿ: ಮೂವರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಕಾನೂನು ಬಾಹಿರವಾಗಿ ಹುಕ್ಕಾ ಬಾರ್‌ ನಡೆಸುತ್ತಿದ್ದ ಕೆಫೆಯೊಂದರ ಮೇಲೆ ಕೆಂಪೇಗೌಡ ವಿಮಾನ ನಿಲ್ದಾಣ  ಪೊಲೀಸರು ದಾಳಿ ನಡೆಸಿ 12 ಹುಕ್ಕಾ ಚಿಲುಮೆ, 12 ಹುಕ್ಕಾ ಪೈಪ್‌, 15 ಫ್ಲೇವರ್ಸ್‌, ಸಿಗರೇಟ್‌ ಪ್ಯಾಕ್ಸ್‌ ವಶಪಡಿಸಿಕೊಂಡಿದ್ದಾರೆ. 

ಕನ್ನಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿಯ ಸ್ಕೈವಾಕ್ ಸಮೀಪದ ಕೆಫೆ ಹೈವೆಯಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಯುತ್ತಿತ್ತು. ಈ ಬಗ್ಗೆ ಪೊಲೀಸರು ದಾಳಿ ನಡೆಸಿ ಅಸ್ಸಾಂನ ಮೂಲದ ಅತೀಕುರ್ ರೆಹಮಾನ್, ಅಯೂಬ್ ಖಾನ್, ಹರಿಬಹ್ದೂರ್ ಎಂಬುವರನ್ನು ಬಂಧಿಸಿದ್ದಾರೆ.

ಕೆಫೆ ಮಾಲೀಕರಾದ ಬೆಂಗಳೂರಿನ ವಾಸೀಂ ಅಹ್ಮದ್‌ ಹಾಗೂ ಮೊಹ್ಮದ್‌ ಸಲ್ಮಾನ್‌ ಎಂಬುವರು ದಾಳಿ ಸಂಬಂಧ ಮಾಹಿತಿ ದೊರೆತ ಕೂಡಲೇ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.