ಚಿಕ್ಕನಹಳ್ಳಿಗೇಟ್(ಹೊಸಕೋಟೆ): ಹೊಸಕೋಟೆ ಮತ್ತು ಕೋಲಾರ ರಾಷ್ಟೀಯ ಹೆದ್ದಾರಿ–75ರಲ್ಲಿರುವ ಫರ್ನಿಚರ್ ಗೋದಾಮು ಪಕ್ಕದಲ್ಲಿ ಸುರಿದಿದ್ದ ಸೊಫಾ ಮತ್ತು ಕುರ್ಚಿ ತಯಾರಿಕೆಯ ವ್ಯರ್ಥ ವಸ್ತುಗಳ ರಾಶಿಗೆ ವಿದ್ಯುತ್ ಶಾರ್ಟ್ ಸರ್ಕಿಟ್ ಬೆಂಕಿ ತಗುಲಿ ಹೊತ್ತಿ ಉರಿದಿದೆ.

ಇದನ್ನು ಗಮನಿಸಿದ ಗೋದಾಮಿನ ಕಾರ್ಮಿಕರು ಮತ್ತು ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿ, ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು. ನಂತರ ಬಂದ ಅಗ್ನಿ ಶಾಮಕ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸಿದರು.

ಕಾರ್ಮಿಕರು ಮತ್ತು ಸ್ಥಳೀಯರು ನೆರವಿನಿಂದ ಗೋದಾಮಿಗೆ ಬೆಂಕಿ ಹರಡದಂತೆ ನಿಯಂತ್ರಿಸಿದರು. ಬಳಿಕ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತಂದರು ಎಂದು ಫರ್ನಿಚರ್ ಗೋದಾಮಿನ ಮಾಲೀಕ ದೇವರಾಜ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-18-2090802037

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.