ಹೊಸಕೋಟೆ: ಜನರಲ್ಲಿನ ಭಕ್ತಿ ಭಾವ ಶ್ರದ್ಧೆಯಿಂದ ಕೂಡಿದ್ದಾಗ ಮಾತ್ರ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ. ಆಚರಣೆ, ಜಾತ್ರೆ ಉತ್ಸವಗಳು ಇದರ ಭಾಗ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ತಾಲ್ಲೂಕಿನ ಅಪ್ಪಸಂದ್ರ ಗ್ರಾಮದಲ್ಲಿ ಕುರುಬ ಜನಾಂಗದ ಭತ್ತೇಶ್ವರ ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.

ಪ್ರತಿಯೊಬ್ಬರು ಪರಸ್ವರ ಪ್ರೀತಿ, ವಿಶ್ವಾಸ, ಗೌರವದಿಂದ ಎಲ್ಲರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ದೇವರಿಗೆ ಜಾತಿ, ಧರ್ಮ ಎಂಬುದಿಲ್ಲ. ತಮ್ಮ ಅಂತರಾಳದಲ್ಲಿನ ಮನಸ್ಸಿನಲ್ಲಿ ಕಾಣುವ ದೇವರ ನೋಟ ಸ್ವಚ್ಛತೆಯಿಂದ ಕೂಡಿರಬೇಕಷ್ಟೇ ಎಂದರು.

ಹಾಲುಮತ ಕುಲಗುರು ಶ್ರೀಗುರು ಸಿದ್ದಲಿಂಗಆರಾಧ್ಯ ಮಾತನಾಡಿ, ಮನಸ್ಸಿನ ದೇವರು ಸ್ವಚ್ಛವಾಗಿರಬೇಕು. ಮನದಲ್ಲಿ ಕಲ್ಮಶ ತುಂಬಿಕೊಂಡು ದೇವರು ಮುಂದೆ ಹೋಗಿ ಕೈ ಮುಗಿದರೇ ಏನು ಪ್ರಯೋಜನವಿಲ್ಲ ಎಂದರು.

ಕುರುಬರ ಸಮಾಜದವರು ಸುಮಾರು 12 ರಿಂದ 15 ಸಾವಿರ ಜನ ಸೇರಿದ್ದರು. ತಲೆ ಮೇಲೆ ತೆಂಗಿನಕಾಯಿ ಒಡೆಯುವುದು, ಡೋಳ್ಳು ಕುಣಿತ, ವೀರಗಾಸೆ, ಕಾಲಾಡಿ ಕುಣಿತ ಗಮನ ಸೆಳೆಯಿತು.

ಹೊಸದುರ್ಗ ಕನಕಗುರ ಪೀಠ ಶಾಖಾಮಠದ ಈಶ್ವರನಂದಪುರಿ ಸ್ವಾಮೀಜಿ, ಸಿ.ನಾಗರಾಜ್, ಬಸವೇಶ್ವರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಸ್.ವಿ.ಮುನಿರಾಜು, ಕುಲಗೌಡ್ರು ಗೋವಿಂದರಾಜು, ಮುನಿರಾಜು ವೈ, ರಾಮಕೃಷ್ಣಪ್ಪ, ಪಟೇಲ್ ಬಾಬು, ಗೋವಿಂದರಾಜು, ಎಂ.ನಾರಾಯಣ ಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-15-1509779860

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.