ಹೊಸಕೋಟೆ: ನಗರಕ್ಕೆ ದೇವನಹಳ್ಳಿ ಸಮೀಪದ ನಲ್ಲೂರು ಟೋಲ್ ಮಾರ್ಗದಲ್ಲಿ ಕೊಳತೂರು ಗೇಟ್ ಮೂಲಕ ಆಗಮಿಸಿದ ಅವಿಮುಕ್ತೇಶ್ವರ ರಥವನ್ನು ಮುಖಂಡರು, ಸಾರ್ವಜನಿಕರು ಭಕ್ತಿ ಭಾವದಿಂದ ಅದ್ದೂರಿಯಾಗಿ ಬರಮಾಡಿಕೊಂಡರು.

ರಥವನ್ನು 122 ವರ್ಷಗಳ ಹಿಂದೆ ಮೈಸೂರು ಮಹಾರಾಜರು ಮಾಡಿಸಿಕೊಟ್ಟಿದ್ದರು. ಶತಮಾನ ಕಂಡಿದ್ದ ರಥಕ್ಕೆ ಪದೆ ಪದೆ ದುರಸ್ತಿ ಮಾಡಿಸಬೇಕಾಗುತ್ತಿತ್ತು. ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರುತ್ತಿದ್ದ ಕಾರಣ ಅಹಿತಕರ ಘಟನೆ ಸಂಭವಿಸದಿರಲೆಂದು ಮೂರು ವರ್ಷಗಳ ಹಿಂದೆ ಹೊಸ ತೇರಿನ ನಿರ್ಮಾಣಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಂತೆ ಕಳೆದ ವರ್ಷ ₹2.5 ಕೋಟಿ ವೆಚ್ಚದಲ್ಲಿ ಉಡುಪಿಯಲ್ಲಿ ತೇರು ನಿರ್ಮಾಣಕ್ಕೆ ಚಾಲನೆನೀಡಲಾಗಿತ್ತು.

ಶುಕ್ರವಾರ ನಗರಕ್ಕೆ ಆಗಮಿಸಿದ ಅವಿಮುಕ್ತೇಶ್ವರ ರಥಕ್ಕೆ ಉರಬಾಗಿಲಿನ ಆಂಜನೇಯ ದೇವಾಲಯದ ಬಳಿ ಸ್ವಾಗತ ಕೊರಲಾಯಿತು.

ಶಾಸಕ ಶರತ್ ಬಚ್ಚೆಗೌಡ, ಮಾಜಿ ಸಂಸದ ಬಿ.ಎನ್ ಬಚ್ಚೆಗೌಡ, ಭೈರೇಗೌಡ, ಸತೀಶ್ ಗೌಡ, ಕೇಶವಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-15-1397515324

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.