ಹೊಸಕೋಟೆ: ನಗರದ ಟೋಲ್ ಸಮೀಪ ದೊಡ್ಡ ಅಮಾನಿಕೆರೆ ನಾಲದ ರಾಜಕಾಲುವೆಯ ದಂಡೆ ಮೇಲೆ ಇದ್ದ ಬೃಹತ್ ಜಾಹಿರಾತು ಫಲಕ ಮತ್ತು ಎರಡು ಬೃಹತ್ ಕಂಬಗಳು ಗುರುವಾರ ಸಂಜೆಯ ಮಳೆ ಮತ್ತು ಬಿರುಗಾಳಿ ರಭಸಕ್ಕೆ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಈಚರ್ ವಾಹನದ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಆಪಾಯವಾಗಿಲ್ಲ.

ಸರಕು ಸಾಗಣೆ ವಾಹನದ ಚಾಲಕ ಮತ್ತು ಕ್ಲೀನರ್ ಪಾರಾಗಿದ್ದಾರೆ.ಇದರಿಂದ ಸರ್ವಿಸ್ ರಸ್ತೆಯಲ್ಲಿ ಕಿ.ಮೀ. ಗಟ್ಟಲೆ ಒಂದು ತಾಸಿಗೂ ಹೆಚ್ಚು ಸಮಯ ವಾಹನ ದಟ್ಟಣೆಯಾಗಿತ್ತು. ಸ್ಥಳಕ್ಕೆ ದಾವಿಸಿದ ಹೊಸಕೋಟೆ ನಗರ ಸಂಚಾರ ಠಾಣೆ ಪೊಲೀಸರು ವಾಹನ ದಟ್ಟಣೆ ನಿವಾರಿಸಲು ಹರಸಾಹಸ ಪಡಬೇಕಾಯಿತು. ಜಾಹೀರಾತು ಫಲಕ ತೆರವು ಮಾಡಲು ಬೆಸ್ಕಾಂ ಸಿಬ್ಬಂದಿ ಹಾಗೂ ಹೆದ್ದಾರಿ ಪೊಲೀಸರು ನೆರವಾದರು.

ರಾಜಕಾಲುವೆಯ ದಂಡೆ ಮೇಲೆ ಅವೈಜ್ಞಾನಿಕವಾಗಿ ಬೃಹತ್ ಜಾಹೀರಾತು ಫಲಕ ನಿರ್ಮಾಣಕ್ಕೆ ಅನುಮತಿ ನೀಡಿರುರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-15-1284918844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.