ಹೊಸಕೋಟೆ: ತಾಲ್ಲೂಕು ಕುರುಬರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಚುನಾವಣೆಯನ್ನು ಏಪ್ರಿಲ್ 3ರಂದು ನಡೆಸಲು ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

ನಗರದ ಕನಕ ಸಮುದಾಯ ಭವನದಲ್ಲಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ತಾಲ್ಲೂಕು ಕುರುಬರ ಸಂಘದ ಪ್ರಸ್ತುತ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿರುವ ಕಾರಣ ಚುನಾವಣೆಯನ್ನು ಇದೇ ಏಪ್ರಿಲ್ 3ಕ್ಕೆ ನಿಗದಿಪಡಿಸಲಾಗಿದೆ. ಅರ್ಹ ಸಂಘದ ಸದಸ್ಯರಿಗೆ ಮಾತ್ರ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಮಾರ್ಚ್ 26, 27 ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3 ವರೆಗೆ ನಾಮಪತ್ರ ಸಲ್ಲಿಕೆ, ಮಾರ್ಚ್ 28ರಂದು ನಾಮ ಪತ್ರಪರಿಶೀಲನೆ, 29ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ, 31ರಂದು ಚುನಾವಣೆಯಲ್ಲಿ ಸ್ಪರ್ದಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ, ಏಪ್ರಿಲ್ 3 ರಂದು ಬೆಳಗ್ಗೆ 9 ಗಂಟೆಯಿಂದ 3 ಗಂಟೆಯವರೆಗೆ ನಗರದ ಕನಕ ಭವನದಲ್ಲಿ ಚುನಾವಣೆ ನೆಡೆಯಲಿದೆ. 3 ಗಂಟೆಯ ನಂತರ ಮತ ಏಣಿಕೆ ಹಾಗೂ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕುರುಬರ ಸಂಘದ ಅಧ್ಯಕ್ಷ ರಾಮಾಂಜಿನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಘದಲ್ಲಿ ಹಳೆಯ 1329 ಸದಸ್ಯರಿದ್ಡು, ಇವರ ಜೊತೆಗೆ ನೂತನವಾಗಿ 750 ಸದಸ್ಯರು ಸೇರ್ಪಡೆಗೊಂಡಿದ್ದು, ಆದರೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಕ್ಕು ಕೇವಲ ಹಳೆಯ ಸದಸ್ಯರಿಗೆ ಮಾತ್ರ ಇರುತ್ತದೆ. ನೂತನವಾಗಿ ಸಂಘದ ಸದಸ್ಯರಾಗಿರುವವರಿಗೆ ಈ ಬಾರಿ ಚುನಾವಣೆಯಲ್ಲಿ ಮತದಾನದ ಹಕ್ಕು ಇರುವುದಿಲ್ಲ. ಇದು ಸಂಘದ ಬೈಲಾ ಪ್ರಕಾರ ಇದ್ದು ಮುಂದಿನ ಬಾರಿ ಚುನಾವಣೆಯಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನ್ನಸಂದ್ರ ನಾಗರಾಜ್, ಕುರುಬರ ಸಂಘದ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ರಾಜಣ್ಣ, ಸಹ ಕಾರ್ಯದರ್ಶಿ ಕೆಂಪಣ್ಣ, ನಿರ್ದೇಶಕರಾದ ಚೌಡಪ್ಪ, ರಘುವೀರ್, ಹುಲ್ಲೂರಪ್ಪ, ಸಿ.ನಾಗರಾಜ್, ಮುನಿರಾಜ್, ನಾರಾಯಣ್, ರಾಜೇಂದ್ರ, ದಶರಥ್, ಎಸ್.ಪಿ ರಾಮು, ಟಿ.ನಾಗರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-15-1374973025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.