ಸಮೇತನಹಳ್ಳಿ (ಹೊಸಕೋಟೆ): ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುವತ್ತಿ ಗ್ರಾಮದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳು ಮನೆಗಳ ಹಕ್ಕುಪತ್ರ ಇಲ್ಲದೆ ಇ-ಸ್ವತ್ತು ಮಾಡಿಸಿಕೊಳ್ಳಲು ಪರದಾಡುತ್ತಿವೆ. ಮನೆಗಳ ಇ–ಖಾತೆಗಾಗಿ ಕಚೇರಿಗಳಿಗೆ ಅಲೆದು ಸುಸ್ತಾಗಿ ಕೈಚೆಲ್ಲಿ ಕುಳಿತಿವೆ.

ಗ್ರಾಮದಲ್ಲಿ 60–70 ವರ್ಷದ ಹಿಂದೆ ಸರ್ವೆ ನಂಬರ್ 88ರಲ್ಲಿ ಕಟ್ಟಿಕೊಂಡಿದ್ದ ಮನೆಗಳಿಗೆ ಸರ್ಕಾರದಿಂದ 9/10 ಹಕ್ಕು ಪತ್ರ ವಿತರಿಸಲಾಗಿತ್ತು. ಈಗ ಇ- ಸ್ವತ್ತು ಮಾಡಿಸಲು ಹೋದರೆ ಹಕ್ಕುಪತ್ರ ಇಲ್ಲ ಎಂದು ತೋರಿಸುತ್ತಿದೆ.

ಈ ಜಾಗ ಸರ್ವೆ ನಂಬರ್ನಲ್ಲಿರುವ ಕಾರಣ ಗ್ರಾಮ ಠಾಣಗೆ ಸೇರಿಸಿ 11 ಬಿ ಖಾತಾ ಮಾಡಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ, ತಾ.ಪಂ ಇಒ, ತಹಶೀಲ್ದಾರ್ ಸೇರಿದಂತೆ ಎಲ್ಲರಿಗೂ ಎರಡು– ಮೂರು ವರ್ಷದಿಂದ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಈ ಕುಟುಂಬ ಸದಸ್ಯರು.

ಇ-ಸ್ವತ್ತು ಮಾಡಿಸಲು ಹೋದರೆ ವಾಸಿಸುವ ಜಾಗ ಸಾರ್ವಜನಿಕ ರಸ್ತೆಯ ಜಾಗ ಎಂದು ತೋರಿಸುತ್ತಿದ್ದೆ. ರಸ್ತೆ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಎಂದು ಮುಂದಿನ ದಿನಗಳಲ್ಲಿ ತಾಲ್ಲೂಕು ಆಡಳಿತ ಮನೆ ಕೆಡವಲು ಮುಂದಾದರೆ 200ಕ್ಕೂ ಹೆಚ್ಚು ಕುಟುಂಬಗಳು ಎಲ್ಲಿಗೆ ಹೋಗಬೇಕು.

250 ಕುಟುಂಬಗಳಲ್ಲಿ 20 ಜನಕ್ಕೆ ಮಾತ್ರ ಹಕ್ಕು ಪತ್ರ ಸಿಕ್ಕಿದೆ. ಉಳಿದ ಯಾರಿಗೂ ಹಕ್ಕು ಪತ್ರ ಸಿಕ್ಕಿಲ್ಲ. ಅದನ್ನು ಪಡೆಯುವುದು ಸಹ ಮರೀಚಿಕೆಯಾಗಿದೆ.

ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಬಸವರಾಜು ಅವರಿಗೆ ನಮ್ಮ ಗ್ರಾಮದ ಸರ್ವೆ ನಂಬರ್ ಅನ್ನು ಗ್ರಾಮ ಠಾಣೆಗೆ ಸೇರಿಸಿ ಹಕ್ಕು ಪತ್ರ ದೊರಕಿಸಿಕೊಡುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಅನುರಾಧ ಅವರಿಗೆ ಪರಿಶೀಲನೆಗೆ ಕಳಿಸಿದ್ದರು. ಅಷ್ಟರಲ್ಲೇ ಜಿಲ್ಲಾಧಿಕಾರಿ ಬಸವರಾಜು ವರ್ಗಾವಣೆ ಹೊಂದಿದ್ದರಿಂದ ಏನು ಪ್ರಗತಿ ಕಾಣದ ಸ್ಥಿತಿಯಲ್ಲಿ ಕಡತದಲ್ಲಿಯೇ ಉಳಿದುಕೊಂಡಿದೆ.

ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಇ.ಒ ಅವರನ್ನು ಕೇಳಿದರೆ ಪ್ರಯೋಜನವಾಗಿಲ್ಲ. ಯಾವಾಗ ಮನೆ ನೆಲಸಮ ಮಾಡುತ್ತಾರೆಯೋ ಎಂಬ ಭಯದಲ್ಲಿ ಬದುಕುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೊಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.