ಹೊಸಕೋಟೆ: ಒಳ ಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯನ್ನು ತಿರಸ್ಕರಿಸಿ ಮರು ಪರಿಶೀಲಿಸಬೇಕು ಎಂದು ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆದ ಹೋರಾಟದಲ್ಲಿ ಭಾಗಹಿಸಲು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸೇರಿದ ಬಲಗೈ ಸಮುದಾಯದ 1,500 ಕ್ಕೂ ಹೆಚ್ಚು ಜನ ನಗರದ ಟೋಲ್ ಭಾಗದಿಂದ ಸುಮಾರು 30 ಕ್ಕೂ ಹೆಚ್ಚು ಬಸ್ಗಳಲ್ಲಿ ತೆರಳಿದರು.

ಜಿ.ಪಂ ಮಾಜಿ ಸದಸ್ಯ ವೈ.ಎಸ್.ಮಂಜುನಾಥ್, ಮೀಸಲಾತಿ ಎಂಬುದು ದಮನಿತ ಸಮುದಾಯಗಳ ಹಕ್ಕು. ಆದರೆ ಎಡಗೈ ಮತ್ತು ಬಲಗೈ ಸಂಬಂಧಿತ ಮೀಸಲಾತಿಯನ್ನು ಹಂಚಿಕೆ ಮಾಡುವಲ್ಲಿ ಸರ್ಕಾರ ಬಿಕ್ಕಟ್ಟನ್ನು ಸೃಷ್ಟಿಸಿರುವುದು ನಿಜಕ್ಕೂ ದಮನಿತ ಸಮುದಾಯಗಳಿಗೆ ಮಾಡುತ್ತಿರುವ ಅನ್ಯಾಯ ಎಂದು ದೂರಿದರು.

ಮೀಸಲಾತಿ ಬಿಕ್ಕಟ್ಟನ್ನು ಸರ್ಕಾರ ಒಮ್ಮತದಿಂದ ಬಗೆಹರಿಸುವ ಬದಲಿಗೆ ದಿಕ್ಕು ತಪ್ಪಿಸಿ ದಲಿತ ಸಮುದಾಯಗಳ ನಡುವೆಯೇ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದೆ. ಆದ್ದರಿಂದ ಸರ್ಕಾರ ಶೀಘ್ರವೇ ತಾಳ್ಮೆಯಿಂದ ಬಗೆಹರಿಸುವ ಕೆಲಸ ಮಾಡಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿನ್ನಸ್ವಾಮಿ, ಸಮುದಾಯದ ಮುಖಂಡ ದೊಡ್ಡಹರಳಗೆರೆ ನಾಗೇಶ, ಕಿರಣ್ ಕುಮಾರ್, ಕೊರಳೂರು ಶ್ರೀನಿವಾಸ್, ದರ್ಶನ್, ಸಂಪತ್, ಅಣ್ಣಯ್ಯಪ್ಪ, ಚೇತನ್, ದೇವರಾಜು, ನಾಗೇಶ್, ಐ.ಆರ್ ನಾರಾಯಣಸ್ವಾಮಿ, ಆಂಜಿನಪ್ಪ, ಜಗನ್ನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-15-1219384845

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.