ಹೊಸಕೋಟೆ: ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಏ.23ರ ಬೆಳಗ್ಗೆ 10.30ಕ್ಕೆ ಎಸ್ಐಆರ್ ಪ್ರತಿರೋಧ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ತಾಲ್ಲೂಕಿನ ಪ್ರಗತಿಪರ ಚಿಂತಕರು, ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಉಳಿಸಲು ನಾಗರಿಕರು ಪಾಲ್ಗೊಳ್ಳಬೇಕೆಂದು ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ ಮನವಿ ಮಾಡಿದೆ.

ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಂದೂ ನಡೆಯದ ಅಪಚಾರ ನಡಿಯುತ್ತಿದೆ. ಅರ್ಧ ಕೋಟಿ ಜನರ ಮತದಾನದ ಹಕ್ಕನ್ನು ಕಸಿದು ಚುನಾವಣೆ ನಡೆಸಲಾಗುತ್ತಿದೆ. ಈ ಮೂಲಕ ಪ್ರಜಾತಂತ್ರ ಪ್ರೇಮಿಗಳೆಲ್ಲರ ಎದೆಗೆ ಚೂರಿ ಇರಿಯಲಾಗಿದೆ ಎಂದು ಒಕ್ಕೂಟದ ತಾಲ್ಲೂಕು ಸಮನ್ವಯಾಧಿಕಾರಿ ಹೈದರ್ ಬೇಗ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಜಿ ಸಚಿವರಾದ ಬಿ.ಟಿ. ಲಲಿತಾ ನಾಯ್ಕ್, ರೈತ ಮುಖಂಡ ಬಡಗಲಪುರ ನಾಗೇಂದ್ರ, ಎಚ್. ಆರ್. ಬಸವರಾಜಪ್ಪ, ಅನುಸೂಯಮ್ಮ, ಹೈದರ್ ಬೇಗ್, ಕಾರ್ಮಿಕ ಚಳವಳಿಯ ಎಸ್. ವರಲಕ್ಷ್ಮಿ, ದಲಿತ ಚಳವಳಿಯ ಮುಖಂಡರಾದ ಎನ್. ವೆಂಕಟೇಶ್, ಇಂದಿರಾ ಕೃಷ್ಣಪ್ಪ, ಇಂದುಧರ ಹೊನ್ನಾಪುರ, ಎದ್ದೇಳು ಕರ್ನಾಟಕದ ಸಮನ್ವಯಕರಾದ ತಾರಾ ರಾವ್, ನಮ್ಮ ಮತ ನಮ್ಮ ಹಕ್ಕು ವೇದಿಕೆಯ ವಿನಯ್ ಶ್ರೀನಿವಾಶ್, ಶ್ರೀಪಾದ್ ಭಟ್, ಗೀತಾ ಮೆನನ್, ಜಾಗೃತ ಕರ್ನಾಟಕದ ಆದಾಮ್ ಖಾನ್, ಅಲ್ಪಸಂಖ್ಯಾತ ಸಮುದಾಯದ ಮಸೂದ್ ಅಬ್ದುಲ್ ಖಾದರ್ ಮತ್ತಿತರರು ಭಾಗವಹಿಸಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-15-65435642

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.