ಸೊಂಪುರ/ಸೊಣದೇವನಹಳ್ಳಿ(ಹೊಸಕೋಟೆ): ಮೂಲಸೌಕರ್ಯ ಕೊರತೆ ನಡುವೆಯೇ ದಶಕಗಳಿಂದ ದುಸ್ತರ ಬದುಕು ನಡೆಯುತ್ತಿರುವ ದೊಡ್ಡಹುಲ್ಲೂರಿನ ಪಂಚಾಯಿತಿಯ ಸೊಂಪುರ ಮತ್ತು ಸೊಣದೇವನಹಳ್ಳಿಗೆ ಸಮಾಜ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಜನರ ಅಹವಾಲು ಆಲಿಸಿದರು.

‘ಪ್ರಜಾವಾಣಿ’ಯಲ್ಲಿ ಸೋಮವಾರ‘ಕೇಳುವವರಿಲ್ಲ ಜೋಡಿ ಗ್ರಾಮದ ಪರಿಶಿಷ್ಟರ ಗೋಳು’ ಸುದ್ದಿ ಪ್ರಕಟವಾಗುತ್ತಿದ್ದಂತೆ ಎರಡು ಗ್ರಾಮಗಳಿಗೆ ದೌಡಯಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು ಜನರ ಅಹವಾಲು ಆಲಿಸಿದರು.

ಸ್ವಂತ ಸೂರು ಮತ್ತು ಶೌಚಾಲಯ ಕಟ್ಟಿಕೊಳ್ಳಲು ಪರದಾಡುವತ್ತಿರುವ ದಲಿತ ಕುಟುಂಬಗಳಿಗೆ ಆರ್ಥಿಕ ಸಹಾಯ ಮತ್ತು ಪಂಚಾಯಿತಿ ಕಡೆಯಿಂದ ನೆರವು ಸಿಗುವಂತೆ ಗ್ರಾಮಸ್ಥರು ಮನವಿ ಮಾಡಿದರು.

ಸೊಂಪುರ ರಾಜಕಾಲುವೆ ಸ್ವಚ್ಛತೆ ಕ್ರಮಗೊಳ್ಳಬೇಕೆಂದು ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ ಪಿಡಿಒ ಆಶಾ ಅವರಿಗೆ ಸ್ಥಳದಲ್ಲೇ ಕರೆಮಾಡಿ ಚರಂಡಿ ಸ್ವಚ್ಛತೆ ಕ್ರಮಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು ತಿಳಿಸಿದರು.

ರಾಜಕಾಲುವೆಯಲ್ಲಿ ಜಲ್ ಜೀವನ್ ಮಿಷನ್ ಅಡಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಿರುವುದನ್ನು ಗಮನಿಸಿ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕರೆ ಮಾಡಿದರು. ಆದರೆ ಯಾರಿದಂಲೂ ಸ್ಪಷ್ಟ ಉತ್ತರ ದೊರೆಯಲಿಲ್ಲ. ಅವರನ್ನ ಕೇಳಿ, ಇವರನ್ನು ಕೇಳಿ ಎಂದು ವಿವಿಧ ಇಲಾಖೆ ಅಧಿಕಾರಿಗಳು ಸಬೂಬು ಹೇಳಿದರು.

ಗ್ರಾ.ಪಂ ಸದಸ್ಯ ರಾಮದಾಸ್ ಮತ್ತು ರಾಮಾಂಜಿನಿ ಗ್ರಾಮಸ್ಥರು ಅಧಿಕಾರಿಗೆ ಮಾಹಿತಿ ನೀಡಿದಂತೆ ತೊಂದರೆ ನೀಡಿದರೂ, ಇದರ ನಡುವೆಯೂ ಅವಕಾಶ ವಂಚಿತ ಮಹಿಳೆಯರು ಮತ್ತು ಗ್ರಾಮಸ್ಥರು ತಮ್ಮ ಅಸಹಾಯಕ ಸ್ಥಿತಿ ತೊಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-15-422720606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.