ಹೊಸಕೋಟೆ: ಬಕ್ರೀದ್ಗಾಗಿ ಮಾರಾಟ ಹಾಗೂ ಮಾಂಸದ ಉದ್ದೇಶಕ್ಕೆ ಮೇಡಿಮಲ್ಲಸಂದ್ರದಲ್ಲಿ 10ಕ್ಕೂ ಹೆಚ್ಚು ರಾಸು ಮತ್ತು 20 ಒಂಟೆಗಳನ್ನು ಕೂಡಿ ಹಾಕಲಾಗಿದೆ ಎಂಬ ಮಾಹಿತಿ ಮೇರೆಗೆ ಶನಿವಾರ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸರ್ಕಾರದ ಭಾರತೀಯ ಪ್ರಾಣಿ ದಯಾ ಮಂಡಳಿ ಸಿಬ್ಬಂದಿ ಮೇಲೆ ಸ್ಥಳೀಯರ ಗುಂಪೊಂದು ಹಲ್ಲೆ ನಡೆಸಿದೆ.

ಪ್ರಾಣಿದಯಾ ಮಂಡಳಿಯ ಅಧಿಕಾರಿ ಸಂಜಯ್ ಕುಲಕರ್ಣಿ ಹಾಗೂ ಪ್ರಾಣಿದಯಾ ಸಂಘದ ಸ್ವಯಂ ಸೇವಕ ಮಂಜುನಾಥ್ ಹಲ್ಲೆಗೆ ಒಳಗಾದವರು. ಅನಗೊಂಡನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅನುಮತಿ ಇಲ್ಲದೆ ರಾಸು ಮತ್ತು ಒಂಟೆಯನ್ನು ಕೂಡಿ ಹಾಕಿರುವ ಖಚಿತ ಮಾಹಿತಿ ಆಧರಿಸಿ ಪ್ರಾಣಿದಯಾ ಮಂಡಳಿ ಸಿಬ್ಬಂದಿ ಪೊಲೀಸರೊಂದಿಗೆ ಶನಿವಾರ ನುಸುಕಿನ ಜಾವ 2.15ಕ್ಕೆ ಸ್ಥಳ ಭೇಟಿ ನೀಡಿ, ಮಹಜರು ನಡೆಸುತ್ತಿದ್ದರು. ಆಗ ಸ್ಥಳಕ್ಕೆ ಭೇಟಿ ನೀಡಿದ ಗುಂಪು, ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆ ನಡೆಸಿದವರ ಹೆಸರು ಮತ್ತು ವಿವರ ನಿರ್ದಿಷ್ಟವಾಗಿ ನೀಡಿದರೂ ಪೊಲೀಸರು, ಅಪರಿಚಿತರಿಂದ ಹಲ್ಲೆ ಎಂದು ಎಫ್ಐಆರ್ ದಾಖಲಿಸಿದ್ದಾರೆ ಎಂದು ಸಂಜಯ್ ಕುಲಕರ್ಣಿ ಆರೋಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-15-1578715394

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.