ಹೊಸಕೋಟೆ: ಅವಿಮುಕ್ತೇಶ್ವರ ರಥೊತ್ಸವ ಪ್ರಯುಕ್ತ ರಜಪೂತ ಸಮುದಾಯ ಭಾನುವಾರ ಸಂಜೆ ಅವಿಮುಕ್ತೇಶ್ವರ ಮತ್ತು ಬಾಲ ತ್ರಿಪುರಾ ಸುಂದರಿ ಉತ್ಸವ ಮೂರ್ತಿಗಳನ್ನು ಹೂವಿನ ಪಲ್ಲಕಿಯಲ್ಲಿಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿತು.

ರಥೊತ್ಸವದ ಎರಡು ದಿನದ ನಂತರ ವಸಂತೋತ್ಸವದ ಪ್ರಯುಕ್ತ ಅವಿಮುಕ್ತೇಶ್ವರ ಮತ್ತು ಬಾಲ ತ್ರಿಪುರಾ ಸುಂದರಿ ಉತ್ಸವ ಮೂರ್ತಿಗಳನ್ನು ರಜಪೂತ ಸಮುದಾಯಕ್ಕೆ ಒಪ್ಪಿಸಲಾಗುತ್ತದೆ. ಅದರಂತೆ ಈಚೆಗೆ ಉತ್ಸವ ಮೂರ್ತಿಗಳನ್ನು ರಜಪೂತ ಸಮುದಾಯಕ್ಕೆ ಒಪ್ಪಿಸಲಾಯಿತು.

ದೇವಸ್ಥಾನದಿಂದ ಉರಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ, ರಜಪೂತಜರ ಪೇಟೆ, ತೇರು ಬೀದಿ, ಅರಳೆಪೇಟೆ, ಕಮ್ಮಾವಾರಿಪೇಟೆ ಮೂಲಕ ಹೂವಿನ ಪಲ್ಲಕಿ ಮೆರವಣಿಗೆ ನಡೆಯಿತು.

ನೂರಾರು ರಜಪೂತ ಕುಟುಂಬಗಳು ಭಾಗವಹಿಸಿದ್ದವು.

ತಾಲ್ಲೂಕು ರಾಜಪೂತ ಸಭಾದ ಅಧ್ಯಕ್ಷರಾದ ಧರ್ಮಸಿಂಗ್, ಉಪಾಧ್ಯಕ್ಷ ಆನಂದ್ ಸಿಂಗ್, ಪ್ರಧಾನ ಕಾರ್ಯದರ್ಶಿ ಎಚ್.ಬಿ ಮಂಜುನಾಥ್ ಸಿಂಗ್, ಸಹ ಕಾರ್ಯದರ್ಶಿಗಳಾದ ಜಿ. ನರೇಂದ್ರ ಸಿಂಗ್, ಸೋಮಸಿಂಗ್ ಹೆಚ್. ಬಿ, ಸಂಚಾಲಕ ಲಕ್ಷ್ಮಣ್ ಸಿಂಗ್ ಆರ್, ಸದಸ್ಯರಾದ ರಾಜೇಂದ್ರ ಸಿಂಗ್, ಜೆ. ಆನಂದ್ ಸಿಂಗ್, ಮಹೇಂದ್ರ ಸಿಂಗ್, ಸಂತೋಷ್ ಸಿಂಗ್, ಜಯಂತ್ ಸಿಂಗ್, ತಾರಕ್ ರಾಮ್ ಸಿಂಗ್, ಬಲರಾಮ್ ಸಿಂಗ್, ಅಜಯ್ ಸಿಂಗ್, ಕುಮಾರ್ ಸಿಂಗ್, ನಾಗೇಂದ್ರ ಸಿಂಗ್, ನಿತಿನ್ ಸಿಂಗ್, ಶಶಿ ಸಿಂಗ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.