ಜಡಿಗೇನಹಳ್ಳಿ(ಹೊಸಕೋಟೆ): ಇಲ್ಲಿಗೆ ಸಮೀಪದ ದೇವಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ.1ರಲ್ಲಿ ಪರಿಶಿಷ್ಟರ ಪಿತ್ರಾರ್ಜಿತ ಆಸ್ತಿಯನ್ನು ಆಶ್ರಯ ಯೋಜನೆಗೆ ನಿಯಮ ಬಾಹಿರವಾಗಿ ಸೇರಿಸಿ, ಮನೆಗಳನ್ನು ಖಾಲಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಪರಿಶಿಷ್ಟ ಕುಟುಂಬಗಳು ಆರೋಪಿವೆ.

‘ಹೋಬಳಿಯ ದೇವಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ.1ರ 1 ಎಕರೆ 20 ಗುಂಟೆಯಲ್ಲಿ 70 ವರ್ಷದಿಂದ ಕೃಷಿ ಮಾಡಿಕೊಂಡಿ ವಾಸವಿದ್ದೇವೆ. ಆದರೆ ಇದಕ್ಕೆ ಪೋಡಿ ಮಾಡಿಕೊಡಲು ಒತ್ತುವರಿದಾರರ ಒತ್ತಡದಿಂದ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ’ ಎಂದು ಪರಿಶಿಷ್ಟ ಕುಟುಂಬವೊಂದು ಹಾಗೂ ದಲಿತ ಪರ ಸಂಘಟಟನೆಗಳು ದೂರಿವೆ.

ಈ ಸಂಬಂಧ ಈಚೆಗೆ ಪರಿಶಿಷ್ಟಪರ ಸಂಘಟನೆಗಳೊಂದಿಗೆ ಪ್ರತಿಭಟನೆ ನಡಸಿದ ಕುಟುಂಬವು ‘ಇದು ಪರಿಶಿಷ್ಟರ ಪಿತ್ರಾರ್ಜಿತ ಆಸ್ತಿ, ಅತಿಕ್ರಮ ಪ್ರವೇಶ ಮಾಡಬಾರದು’ ಎಂದು ಫಲಕ ಅಳವಡಿಸಿ ಪ್ರತಿಭಟನೆ ನಡೆಸಿತು.

‘ದೇವಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ.1ರಲ್ಲಿ 13 ಎಕರೆ ಸರ್ಕಾರಿ ಗೋಮಾಳ ಜಮೀನು ಇದೆ. ಲೇಟ್ ಚಿಕ್ಕಮುನಿವೆಂಕಟಪ್ಪ ಅವರು 70 ವರ್ಷದಿಂದ ಸಾಗುವಳಿ ಮಾಡಿದ್ದರು. ಹೀಗಾಗಿ 1 ಎಕರೆ 20 ಗುಂಟೆ ಜಮೀನನ್ನು 1998ರಲ್ಲಿ ಖಾತಾ ಮಾಡಿಕೊಡಲಾಗಿದೆ. 2003 ರವರೆಗೂ ಇವರ ಹೆಸರಿನಲ್ಲೇ ಹಳೆ ಖಾತಾ ತೋರಿಸುತ್ತಿದೆ. ಆ ನಂತರ ವಜಾಗೊಳಿಸಿ, ಆಶ್ರಯ ಯೋಜನೆಗೆ ಬರುವಂತೆ ಮಾಡಲಾಗಿದೆ. ಪೋಡಿ ಮತ್ತು ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಕೆಲಸ ಆಗುತ್ತಿಲ್ಲ. ಇದರ ಹಿಂದೆ ಪ್ರಭಾವಿ ಒತ್ತುವರಿದಾರರ ಕೈವಾಡವಿದೆ’ ಎಂದು ಕುಟುಂಬದ ಅರುಣ್ ಕುಮಾರ್ ದೂರಿದ್ದಾರೆ.

ಮೃತ ಚಿಕ್ಕ ಮುನಿವೆಂಕಟಪ್ಪ ಅವರಿಗೆ ಆರು ಹೆಣ್ಣುಮಕ್ಕಳು ಅವರ ತಮ್ಮ ಗೋವಿಂದಪ್ಪ ಅವರಿಗೆ ಐವರು ಮಕ್ಕಳಿದ್ದು, ಇಲ್ಲಿಯೇ ಮನೆ ಕಟ್ಟಿಕೊಂಡು ವಾಸಮಾಡುತ್ತಿದ್ದಾರೆ. ಪ್ರಭಾವಿ ಒತ್ತುವರಿದಾರರು ಸರ್ವೇ ನಂಬರ್ 1 ರಲ್ಲಿನ 13 ಎಕರೆಯನ್ನೂ ಲಪಟಾಯಿಸಲು ಇವರ ಜಾಗ ಅಡ್ಡಿಯಾಗಿದೆ ಎಂದು ಆಶ್ರಯ ಯೋಜನೆ ಹೆಸರಿನಲ್ಲಿ ನಿವೇಶನ ಹಂಚಿಕೆಗೆ ಮುಂದಾಗುತ್ತಿದ್ದಾರೆ ಎಂದು ಪರಿಶಿಷ್ಟಪರ ಸಂಘಟನೆಯ ಹೋರಾಟಗಾರರು ಆರೋಪಿಸಿದ್ದಾರೆ.

ಈ ಸಂಬಂಧ ತಹಶೀಲ್ದಾರ್, ಉಪವಿಭಾಗಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಬೇಸರಿಸಿದ್ದಾರೆ.

ಆಯೋಗ ಎಸಿ ಕೋರ್ಟ್ ಆದೇಶಕ್ಕೂ ಕಿಮ್ಮತ್ತಿಲ್ಲ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವು 2025ರ ಜನವರಿಯಲ್ಲೇ ಅನುಭೋಗದ ಖಾತೆ ಮತ್ತು ಪಹಣಿ ಮಾಡಿಕೊಡುವಂತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಹೊಸಕೋಟೆಯ ತಹಶೀಲ್ದಾರ್ ಅವರಿಗೆ ಆದೇಶ ಮಾಡಿದೆ. ಈ ಸಂಬಂಧ ಅಂಬೇಡ್ಕರ್ ಸೇವಾ ಸಮಿತಿಯ ಅಧ್ಯಕ್ಷ ಕೆ.ಎಂ.ಸಂದೇಶ್ ಅವರು ಸಲ್ಲಿದ ಮನವಿಯಂತೆ ಅನುಬೋಗದ ಖಾತೆ ಪಹಣಿ ಪರಿಶೀಲಿಸಿ ಹಿಂಬರಹ ಮತ್ತು ವರದಿಯನ್ನು ಸಲ್ಲಿಸುವಂತೆ 2025ರ ನವೆಂಬರ್ ತಿಂಗಳಲ್ಲಿ ದೊಡ್ಡಬಳ್ಳಾಪುರದ ಉಪ ವಿಭಾಗಾಧಿಕಾರಿ ನ್ಯಾಯಾಲಯವು ಸಹ ತಹಶೀಲ್ದಾರ್ಗೆ ಆದೇಶ ಮಾಡಿತ್ತು. ಆದರೆ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಕುಟುಂಬದ ಸದಸ್ಯರು ಆರೋಪಿಸುತ್ತಿದ್ದಾರೆ.

ಖಾಲಿ ಮಾಡಿ ಎಂದರೆ ಎಲ್ಲಿಗೆ ಹೋಗೋಣ? ನಮ್ಮ ತಾತನ ಕಾಲದ ಅನುಭವದ ಜಮೀನಿನಲ್ಲಿ ಚಿಕ್ಕಪ್ಪ ದೊಡ್ಡಪ್ಪ ಮಕ್ಕಳು ಒಂದೇ ಕಡೆ ಆರು ಮನೆ ಕಟ್ಟಿಕೊಂಡು 25 ಜನ ವಾಸ ಮಾಡುತ್ತಿದ್ದೇವೆ. ನಮ್ಮ ಪೂರ್ವಜರ ಸಮಾಧಿಗಳು ಇಲ್ಲಿಯೇ ಇವೆ. ಈಗ ಕೆಲ ಪ್ರಭಾವಿಗಳ ತಾಳಕ್ಕೆ ಕುಣಿಯುತ್ತಿರುವ ಅಧಿಕಾರಿಗಳು ಆಶ್ರಯ ಯೋಜನೆ ನೆಪವೊಡ್ಡಿ ಜಾಗ ಖಾಲಿ ಮಾಡಿ ಎಂದರೆ ಎಲ್ಲಿಗೆ ಹೋಗೋಣ ಡಿ.ಜಿ.ಅರುಣ್ ಕುಮಾರ್ ದೇವಶೆಟ್ಟಿಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.