ಹೊಸಕೋಟೆ: ನಿರ್ವಹಣೆಗೆ ನಿರ್ಲಕ್ಷ್ಯ, ಒತ್ತುವರಿ ಭೂತ, ಕೆರೆ ಮಣ್ಣು ಅಕ್ರಮ ಸಾಗಾಟ, ಕೆರೆ ಸೇರುತ್ತಿರುವ ಕೊಳಚೆ ನೀರು, ತ್ಯಾಜ್ಯ ವಿಲೇವಾರಿ...ಇಂತಹ ಪೆಡಂಭೂತಗಳು ಒಂದು ಕಾಲದಲ್ಲಿ ನಗರದ ಜೀವನಾಡಿಯಾಗಿದ್ದ ದೊಡ್ಡ ಅಮಾನಿಕೆರೆಯನ್ನು ನುಂಗಿ ಹಾಕುತ್ತೇವೆ. ಈ ಮೂಲಕ ಕೆರೆ ವಾತಾವರಣದಲ್ಲಿರುವ ಪಕ್ಷಿ, ಜಲಚರಗಳ ಆವಾಸ ಸ್ಥಾನವು ಅಪಾಯದಲ್ಲಿ ಸಿಲುಕಿದೆ.

ನಗರದ ದೊಡ್ಡ ಅಮಾನಿಕೆರೆಯನ್ನು ಒತ್ತುವರಿಯಿಂದ ರಕ್ಷಣೆ ಮಾಡಬೇಕು, ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬ ದಶಕಗಳ ಬೇಡಿಕೆ ಸರ್ಕಾರ ಮತ್ತು ಆಡಳಿತದಿಂದ ಯಾವ ಸ್ಪಂದನೆಯೂ ದೊರೆತಿಲ್ಲ. ನಗರ ಅಭಿವೃದ್ಧಿ, ಆಧುನಿಕ ಕಾಲದ ಮನುಷ್ಯನ ಚಟುವಟಿಕೆಯಿಂದ ನಲುಗಿ ಹೋಗಿರುವ ಕೆರೆ ಉಳಿವಿಗೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಜನರ ಕೂಗಿಗೆ ಯಾರು ಕಿವಿ ಆಗುತ್ತಿಲ್ಲ.

ಬೆಂಗಳೂರಿನ ನಗರೀಕರಣದ ಕರಿ ಛಾಯೆಯಿಂದಾಗಿ 808 ಎಕರೆಯಷ್ಟು ವಿಶಾಲವಾಗಿದ್ದ ಕೆರೆ ದಿನೇ ದಿನೇ ಕರಗುತ್ತಿದೆ. ಶ್ರೀಮಂತರು, ಪ್ರಭಾವಿಗಳ ಒತ್ತುವರಿ, ಮಣ್ಣ ಸಾಗಾಟದಿಂದ ಕೆರೆ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಚರಂಡಿ ಕೊಳಚೆ ನೀರು ಕೆರೆಯನ್ನು ಕಲುಷಿತಗೊಳಿಸಿದೆ.

ಕೆರೆಯ ಕಟ್ಟೆ ಮತ್ತು ಅಂಗಳದಲ್ಲಿ ಮುಂಜಾನೆ ಇಲ್ಲವೇ ರಾತ್ರಿ ವೇಳೆ ಬೆಂಗಳೂರು ಮತ್ತು ಹೊಸಕೋಟೆ ಸುತ್ತಮುತ್ತಲಿನ ಭಾಗದಿಂದ ಕಟ್ಟಡ ತ್ಯಾಜ್ಯ(ಡೆಬ್ರಿಸ್), ಮಾಂಸದಂಗಡಿಯ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಇದರಿಂದ ಕೆರೆ ಮಾತ್ರವಲ್ಲ ವಾತಾವರಣವೇ ಕಲುಷಿತವಾಗಿದೆ.

ಹಳ್ಳಕೊಳ್ಳ ಒತ್ತುವರಿ ಕೆರೆ ಸ್ವರೂಪವನ್ನೆ ಬದಲಾಯಿಸಿದೆ. ಈ ಭಾಗದ ಅತಿ ದೊಡ್ಡ ಜಲ ಮೂಲ ಮತ್ತು ದಕ್ಷಿಣ ಪಿನಾಕಿನಿ ಹರಿವಿನ ತಾಣವೂ ಆಗಿದ್ದ ಕೆರೆಗೆ ತುರ್ತು ಚಿಕಿತ್ಸೆ ಬೇಕಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-15-2079502898

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.