ಹೊಸಕೋಟೆ: ರಾಜ್ಯ ಸರ್ಕಾರವು ತಮ್ಮ ಮನವಿಗೆ ಸ್ಪಂದಿಸಿದ್ದು, ಹೊಸಕೋಟೆಯಲ್ಲಿ ಹೂವಿನ ಮಂಡಿ ಮತ್ತು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅನುಮತಿ ನೀಡಿದೆ. ಇನ್ನೊಂದುವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಜನಾರ್ಪಣೆಗೊಳಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮಾಂತರ ಜಿಲ್ಲೆಯಲ್ಲಿ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನಗರದ ಆನೇಕಲ್ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂ ಬೆಳೆಯಲಾಗುತ್ತದೆ. ಹೊಸಕೋಟೆ ತಾಲ್ಲೂಕು ಒಂದರೆಯಲ್ಲೇ ಸುಮಾರು 2,500 ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಚೆಂಡು, ರೋಸ್, ಚಾಮಂತಿ ಮತ್ತಿತರ ಹೂ ಬೆಳೆದು ಶೇ 80ರಷ್ಟನ್ನು ಬೇರೆ ಬೇರೆ ಭಾಗಕ್ಕೆ ಸರಬಾರಜು ಮಾಡಲಾಗುತ್ತಿದೆ ಎಂದರು.

ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಹೂಮಂಡಿ ನಿರ್ಮಾಣವಾದರೆ ಬೇರೆ ತಾಲ್ಲೂಕಿಗೆ ಹೊಲಿಸಿಕೊಂಡರೆ ವರ್ಷಕ್ಕೆ ಸುಮಾರು 6.5 ಯಿಂದ 7 ಲಕ್ಷ ಟನ್ ಹೂ ವಹಿವಾಟು ನಡೆಸಬಹುದ. ರೈತರಿಗೆ ನೇರವಾಗಲಿದೆ. ಇದರಿಂದ ರೈತರು ಮುಂಜಾನೆ ಎದ್ದು 4 ಗಂಟೆಗೆ ಮಾರುಕಟ್ಟೆಗೆ ಬರುವುದು ಹಾಗೂ ಕಿಲೊ ಮೀಟರ್ ಗಟ್ಟಲೆ ಸಂಚರಿಸುವುದು ತಪ್ಪುತ್ತದೆ ಎಂದು ಹೇಳಿದರು.

ನಗರದ ಮಾಲೂರು ರಸ್ತೆಯಲ್ಲಿರುವ ಗೋಣಕನಹಳ್ಳಿ ಗ್ರಾಮದ ಬಳಿ ಇರುವ ಎಪಿಎಂಸಿ ಮಾರುಕಟ್ಟೆಯ 25 ಎಕರೆ ಜಾಗದಲ್ಲಿ ಈಗಾಗಲೇ 9 ಎಕರೆ 20 ಗುಂಟೆಯಲ್ಲಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಇನ್ನು ಒಂದೂವರೆ ತಿಂಗಳಲ್ಲಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.