ಹೊಸಕೋಟೆ: ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ರೆಡ್ಡಿ ಜನ ಸಂಘದಿಂದ ನಗರದ ತಾಲ್ಲೂಕು ಕಚೇರಿಯಲ್ಲಿ 604ನೇ ಮಹಾ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ನಡೆಯಿತು.

ತಾಲ್ಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ 14ನೇ ಶತಮಾನದಲ್ಲಿ ಶಿವಶರಣೆಯಾಗಿ, ಸಾದ್ವಿಯಾಗಿ ಸಮಾಜಕ್ಕೆ ನವ ಚೈತನ್ಯ ತುಂಬಿದ್ದಾರೆ. ಕಷ್ಟದಲ್ಲಿ ನೊಂದು ಬೆಂದು ಶಿವ ಭಕ್ತಿಯಾಗಿ ನಿತ್ಯ ಶಿವ ಸ್ಮರಣೆ ಮಾಡುತ್ತಾ ಭಕ್ತಿ ಮಾರ್ಗ ಅನುಸರಿಸಿದವರು. ಹೇಮರೆಡ್ಡಿ ಮಲ್ಲಮ್ಮನ ಶಿವ ಭಕ್ತಿ ಮತ್ತು ಆದರ್ಶ ನಮಗೆಲ್ಲ ದಾರಿ ದೀಪವಾಗಬೇಕು ಎಂದರು.

ಹೇಮರೆಡ್ಡಿ ಮಲ್ಲಮ್ಮ ಬಡತನದಲ್ಲಿ ಹುಟ್ಟಿ ಕಷ್ಟಗಳನ್ನು ಅನುಭವಿಸಿ, ತನಗಾಗಿ ಏನು ಬೇಡ ಸಮಾಜಕ್ಕಾಗಿ ಎಲ್ಲವೂ ಸಿಗಲಿ ಎಂಬ ನಿಸ್ವಾರ್ಥ ಭಾವವು ಮಹಿಳೆಯರಿಗೆ ಸ್ಪೂರ್ತಿ ಆದರ್ಶ ಆಗಬೇಕು ಎಂದು ಹೇಳಿದರು.

ಉಪ ತಹಸೀಲ್ದಾರ್ ಚೈತ್ರ, ಹೇಮರೆಡ್ಡಿ ಮಲ್ಲಮ್ಮ ಬದುಕಿನಲ್ಲಿ ಸಾಕಷ್ಟು ಅವಮಾನ ಸಹಿಸಿಕೊಂಡು ಧೈರ್ಯದಿಂದ ಬದುಕಿ ಸಮಾಜದಲ್ಲಿ ಮಹಾಸಾದ್ವಿಯಾದರು. ಮಹಿಳೆಯರು ಅವರ ಹಾದಿಯಲ್ಲಿ ಸಾಗಿದಾಗ ಮಾತ್ರ ಅವರ ಬದುಕಿಗೆ ಒಂದು ಅರ್ಥ ಬರುತ್ತದೆ ಎಂದರು.

ರೆಡ್ಡಿ ಜನಸಂಘದ ಶಂಕರ್ ರೆಡ್ಡಿ, ಲತಾ ರೆಡ್ಡಿ, ನಾಗರಾಜ್ ರೆಡ್ಡಿ, ಚಂದ್ರಾರೆಡ್ಡಿ, ಮನಮೋಹನ್ ರೆಡ್ಡಿ, ನಾಗೇಂದ್ರಪ್ರಸಾದ್, ಎಫ್ಡಿಎ ತೇಜಸ್ಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-15-1324377385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.