ಹೊಸಕೋಟೆ: ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೂ ನೀರು ಒದಗಿಸಲು ‘ಮನೆ ಮನೆಗೆ ಗಂಗೆ’ ಘೋಷ್ಯವಾಕ್ಯದಡಿ ಕೇಂದ್ರ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆ ಯೋಜನೆ ಜಲ ಜೀವನ್ ಮೀಷನ್(ಜೆಜೆಎಂ) ತಾಲ್ಲೂಕಿನಲ್ಲಿ ಹಳ್ಳ ಹಿಡಿದಿದೆ.

ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಬಿಗಾಡಯಿಸಿದೆ. ಜೆಜೆಎಂ ಮೂಲಕ ಮನೆ ಮನೆಗೆ ನೀರು ಬರುತ್ತದೆ ಎಂದು ಕಾಯುತ್ತಿದೆ ಜನರ ಆಸೆ ನೀರಾಗಿ ಹರಿದಿದೆ.

ಅವಧಿ ಮುಗಿದರೂ ಪೂರ್ಣಗೊಳ್ಳದ ಕಾಮಗಾರಿ, ಕೆಲವೆಡೆ ಆರಂಭಗೊಳ್ಳದ ಕಾಮಗಾರಿ, ಕಾಟಾಚಾರಕ್ಕೆ ಎಂಬಂತೆ ಕುಟುಂತಾ ಸಾಗಿರುವ ಕೆಲಸ, ಹೊಸದಾಗಿ ಬೋರ್ವೇಲ್ ಕೊರೆಯುವ ಬದಲು ಹಳೆ ಓವರ್ ಟ್ಯಾಂಕ್ಗೆ ಬಣ್ಣ ಬಳಿದು ಬಿಲ್ ಮಾಡಿರುವುದು, ಚರಂಡಿ ಒಳಗೆ ಪೈಪ್ಲೈನ್ ಅಳವಡಿಕೆ, ಅವೈಜ್ಞಾನಿಕ ನಲ್ಲಿ ಅಳವಡಿಕೆ, ಬಹುತೇಕ ಗ್ರಾಮಗಳಲ್ಲಿ ಬೋರ್ವೇಲ್ ಕೊರದರೂ ಮೋಟರ್ ಅಳವಡಿಸಿಲ್ಲ, ಕಾಮಗಾರಿಗೆ ರಸ್ತೆ ಅಗೆದು ಹಾಗೇ ಬಿಟ್ಟಿರುವುದು, ಮಾನದಂಡ ಗಾಳಿಗೆ.... ಹೀಗೆ ವಿವರಿಸುತ್ತಾ ಹೋದರೆ ದೊಡ್ಡಪಟ್ಟಿಯೇ ಬೆಳೆಯುತ್ತಿದೆ. ತಾಲ್ಲೂಕಿನಲ್ಲಿ ಜೆಜೆಎಂ ಕರ್ಮಕಾಂಡದಿಂದ ಮನೆ ಮನೆಗೆ ಗಂಗೆ ಹರಿದಿಲ್ಲ. ನೀರಿನ ಬವಣೆ ತಪ್ಪಿಲ್ಲ.

ತಾಲ್ಲೂಕಿನಲ್ಲಿ 280ಕ್ಕೂ ಹೆಚ್ಚು ಗ್ರಾಮಗಳಿವೆ. 2022ರಲ್ಲಿ 258 ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಲ್ಲಿ 254 ಮಂಜೂರು ಆಗಿದೆ. ಈ ಕಾಮಗಾರಿ 2025ರ ಮಾರ್ಚ್ಗೆ ಮುಕ್ತಾಯ ಆಗಬೇಕಿತ್ತು. ಆದರೆ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. 171 ಕಾಮಗಾರಿ ಮುಕ್ತಾಯಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆ ಗ್ರಾಮಗಳಿಗೆ ಭೇಟಿ ನೀಡಿದರೆ ಕಾಮಗಾರಿ ಅರೆಬರೆಗೊಂಡಿದೆ. ಜೆಜೆಎಂ ಕೆಲಸ ಸರಿಯಾಗಿ ಆಗುತ್ತಿಲ್ಲವೆಂದು ಆರು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ಒಟ್ಟಾರೆಯಾಗಿ ತಾಲ್ಲೂಕಿನ ಜೆಜೆಎಂ ಯೋಜನೆಯಲ್ಲಿ ಭ್ರಷ್ಟ್ರಾಚಾರ ತುಂಬಿ ತುಳುಕುತ್ತಿದೆ. ಕಾಮಗಾರಿ ನಡೆಸದೆ ಬಿಲ್ ಮಾಡಿಕೊಳ್ಳಲಾಗಿದೆ. ಹಳೆ ಓವರ್ ಟ್ಯಾಂಕ್ಗೆ ಬಣ್ಣ ಬಳಿದು ಹೊಸತು ಎಂದು ಬಿಲ್ ಮಾಡಲಾಗಿದೆ. ಜೆಜೆಎಂ ಕಾಮಗಾರಿ ಎನು? ಎತ್ತ? ಎಂದು ಕೇಳಿದರೆ ಯಾರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಕಾಮಗಾರಿ ಯಾವ ಹಂತದಲ್ಲಿದೆ ಎಂಬುದು ಅಧಿಕಾರಿಗಳಿಗೂ ಗೊತ್ತಿಲ್ಲ. ಈ ಬಗ್ಗೆ ಕೇಳುವ ಮಾಧ್ಯಮಗಳನ್ನು ದೂರ ಇಡಲಾಗುತ್ತಿದೆ. ಆರ್ಟಿಐ ಹಾಕಿದರೂ ಇದುವರೆಗೆ ಮಾಹಿತಿ ನೀಡಿಲ್ಲ. ಆರ್ಟಿಐ ಹಾಕಿರುವುದಕ್ಕೆ ಅಧಿಕಾರಿಗಳಿಂದ ಬೆದರಿಕೆ ಬರುತ್ತಿದೆ ಎಂದು ಆರ್ಟಿಐ ಕಾರ್ಯಕರ್ತರೊಬ್ಬರು ತಿಳಿಸಿದರು.

ಜನರಿಗಂತೂ ಇಂಥದೊಂದು ಯೋಜನೆ ಮನೆಗೆ ನೀರು ಬರುತ್ತಾ ಎಂಬದು ತಿಳಿದಿಲ್ಲ. ಯಾವುದೋ ಕಾಮಗಾರಿ ನಡೆಯುತ್ತಿದೆ ಎಂಬ ಭಾವನೆ ಜನರಲ್ಲಿದೆ ಎನ್ನುತ್ತಾರೆ ಅವರು.

ಅರೆಬಾರಿ ಕಾಮಗಾರಿ ಬಿಟ್ಟರೆ ಪ್ರಗತಿಯೇ ಕಾಣದ ಯೋಜನೆಯಿಂದ ಅಧಿಕಾರಿಗಳ, ಜನ ಪ್ರತಿನಿದಿಗಳ ಮತ್ತು ಗುತ್ತಿಗೆದಾರರ ಜೇಬಿಗೆ ಮಾತ್ರ ಲಕ್ಷ ಲಕ್ಷ ಹಣ ಸೇರಿರುವುದೇ ಮಹತ್ ಸಾಧನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಾಜಕಾರಣಿಗಳು ಅಥವಾ ಅಧಿಕಾರಿಗಳ ಮನೆಗಳಿಗೆ ಮಾತ್ರ ಪೈಪ್ಲೈನ್ ಅಳವಡಿಕೆಗಾಗಿ ರಸ್ತೆಯನ್ನು ಅರ್ಧಂಬರ್ಧ ಅಗೆದು, ಹಾಗೇ ಬಿಡಲಾಗಿದೆ. ನಿರ್ಮಾಣ ಹಂತದಲ್ಲೇ ಓವರ್ ಹೆಡ್ ಟ್ಯಾಂಕ್ ತುಕ್ಕು ಹಿಡಿಯುತ್ತಿದೆ. ನಲ್ಲಿ ಸಂಪರ್ಕಕ್ಕಾಗಿ ಅಳವಡಿಸಿದ ಸಿಮೆಂಟ್ ಸ್ಲ್ಯಾಬ್ಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಕೆಲವೆಡೆ ಸ್ಲ್ಯಾಬ್ ಇಲ್ಲದೆ ನಲ್ಲಿಗಳನ್ನು ಮನೆಗಳ ಗೋಡೆಗಳಿಗೆ ಸಿಕ್ಕಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ನೀರು ಬಿಟ್ಟರೆ ಇಲ್ಲಿ ನೀರು ಹಿಡಿಯುವದಾದರೂ ಹೇಗೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-15-313678849

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.