ಹೊಸಕೋಟೆ: ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಭಿನ್ನಮತ ವ್ಯಕ್ತವಾಯಿತು.

ಎಡಗೈ ಸಮುದಾಯದ ಮುಖಂಡರು ಇಬ್ಬರ ಜಯಂತಿಗಳನ್ನು ಏ. 14ರಂದು ಮಾಡಿ ಎಂದರೆ, ಬಲಗೈ ಸಮುದಾಯದ ಮುಖಂಡರು ಏಪ್ರಿಲ್ 5ರಂದು ಬಾಬು ಜಗಜೀವನ ರಾಮ್ ಜಯಂತಿ ಹಾಗೂ ಏ. 14 ರಂದು ಅಂಬೇಡ್ಕರ್ ಜಯಂತಿ ಆಚರಿಸಿ ಇಬ್ಬರೂ ನಾಯಕರಿಗೆ ಪ್ರತ್ಯೇಕ ಗೌರವ ಸಲ್ಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪುರಸಭಾ ಮಾಜಿ ಸದಸ್ಯ ಎನ್.ನಾಗರಾಜ್ ಮಾತನಾಡಿ, ‘1980ರಿಂದಲೂ ತಾಲ್ಲೂಕಿನಲ್ಲಿ ಬಲಗೈ ಹಾಗೂ ಎಡಗೈ ಎನ್ನುವ ಬೇಧ ಭಾವವಿಲ್ಲದೆ ಬಾಬೂಜಿ ಹಾಗೂ ಅಂಬೇಡ್ಕರ್ ಜಯಂತಿಯನ್ನು ಒಂದೇ ದಿನ ಆಚರಿಸಲಾಗುತ್ತಿತ್ತು. ಎಲ್ಲ ವರ್ಗಗಳ ನಾಯಕರ ಉಪಸ್ಥಿತಿ ಒಗ್ಗಟ್ಟಿನ ಮಂತ್ರವಾಗಿತ್ತು. ಸಾರ್ವಜನಿಕರು ಸಹ ಬೇಧಭಾವ ಮರೆತು ಜಯಂತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ದಲಿತ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುವ ಕಾರ್ಯಕ್ರಮವಾಗಿತ್ತು. ಆದರೆ ಕಳೆದ ವರ್ಷದಿಂದ ಅದ್ಯಾವ ಕುತಂತ್ರವೋ ತಿಳಿಯದು, ಎರಡೂ ಜಯಂತಿಗಳನ್ನು ಪ್ರತ್ಯೇಕವಾಗಿ ಮಾಡಿ ಇಂದಿಗೂ ತಾಲ್ಲೂಕಿನ ದಲಿತರ ನಾಯಕರಲ್ಲಿ ಮನಸ್ಸುಗಳಲ್ಲಿ ಒಮ್ಮತ ಮೂಡದಂತೆ ಮಾಡಿರುವುದು ದುರಂತ’ ಎಂದರು.

ಅಧಿಕಾರಿಗಳು, ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ನಮ್ಮನ್ನು ಒಡೆದು ಆಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಆದರೆ ಅವರು ಎಷ್ಟೇ ನಮ್ಮನ್ನು ದೂರ ಮಾಡಿದರೂ ನಾವು ಅಷ್ಟೇ ಹತ್ತಿರವಾಗುವ ಮೂಲಕ ನಮ್ಮನ್ನು ನಾವೇ ಇನ್ನಷ್ಟು ಬಲಿಷ್ಠಗೊಳಿಸಿಕೊಳ್ಳುತ್ತೇವೆ ಎಂದು ದಲಿತ ಸಂಘಟನೆಯ ಮುಖಂಡ ಶಿವಕುಮಾರ್ ಹೇಳಿದರು.

ಹಿರಿಯ ದಲಿತ ಮುಖಂಡರು, ‘ಬಹುಶಃ ಒಳಮೀಸಲಾತಿ ವಿಚಾರ ಮುಂದೆ ಬಂದಿದ್ದೆ ನಮ್ಮಲ್ಲಿ ಭಿನ್ನಾಭಿಪ್ರಾಯ ಸ್ಫೋಟಕ್ಕೆ ಕಾರಣವೂ ಆಗಿದ್ದಿರಬಹುದು. ನಮ್ಮ ನಮ್ಮಲ್ಲಿಯೇ ಮೀಸಲಾತಿ, ಒಳ ಮೀಸಲಾತಿ ಎಂದು ಸಂಘರ್ಷಕ್ಕೆ ಇಳಿದರೆ ಅದರಿಂದ ಏನು ಪ್ರಯೋಜನವಿಲ್ಲ. ಆದ್ದರಿಂದ ದಲಿತ ಸಮುದಾಯಗಳ ಒಗ್ಗಟ್ಟು ಪ್ರದರ್ಶನವೊಂದೇ ಇದಕ್ಕೆ ಮಾರ್ಗ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಏ. 5ರಂದು ಬಾಬು ಜಗಜೀವನ ರಾಮ್ ಜಯಂತಿಯನ್ನು ಅದ್ದೂರಿಯಾಗಿ ಮಾಡೋಣ. ಇದರಲ್ಲಿ ಬಲಗೈ ಸಮುದಾಯವೂ ಪಾಲ್ಗೊಳ್ಳುತ್ತದೆ. ಏ. 14ರಂದು ಅಂಬೇಡ್ಕರ್ ಜಯಂತಿಯನ್ನು ಎಡಗೈ ಸಮುದಾಯದವರೂ ಸೇರಿ ಒಟ್ಟಿಗೆ ಆಚರಿಸೋಣ. ಇಬ್ಬರೂ ನಾಯಕರಿಗೂ ಜನ್ಮದಿನದಂದೇ ಪ್ರತ್ಯೇಕ ಗೌರವ ಸಲ್ಲಿಸೋಣ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿನ್ನಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಎರಡೂ ನಾಯಕರ ಜಯಂತಿ ಏ. 14ರಂದು ಒಂದೇ ವೇದಿಕೆಯಲ್ಲಿ ಆಚರಣೆ ಮಾಡೋಣ. ಇಲ್ಲದಿದ್ದರೆ ತಾಲ್ಲೂಕು ಕಚೇರಿಯಲ್ಲಿ ಪ್ರತ್ಯೇಕವಾಗಿ ಸಾಂಕೇತಿಕವಾಗಿ ಆಚರಣೆ ಮಾಡಿದ ನಂತರ ಸಂಬಂಧಪಟ್ಟ ಸಮುದಾಯಗಳು ಅವರ ಜಯಂತಿಯನ್ನು ಪ್ರತ್ಯೇಕವಾಗಿ ಮಾಡಿಕೊಳ್ಳಲಿ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜ್, ಆರೋಗ್ಯ ಅಧಿಕಾರಿ ತ್ಯಾಗರಾಜ್, ದಲಿತ ಮುಖಂಡ ಡಿ.ಎಂ ಮುನಿರಾಜ್, ಕೆಆರ್ಬಿ ಶಿವಾನಂದ, ನರಸಿಂಹಯ್ಯ, ಗುಟ್ಟಳ್ಳಿ ನಾಗರಾಜ್, ಸುಬ್ಬರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-15-859288475

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.