ಭಕ್ತರಹಳ್ಳಿ(ಹೊಸಕೋಟೆ): ತಾಲ್ಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರಹಳ್ಳಿಯ ಕರುಣಾಮಯಿ ಕಾಳಿಕಾದೇವಿ ದೇವಾಲಯದ ನಾಲ್ಕನೇ ವರ್ಷದ ಅದ್ದೂರಿ ಜಾತ್ರಾ ಮಹೋತ್ಸವ ಏ.21 ರಿಂದ 26 ರವರೆಗೆ ದಿನ ನಡೆಯಲಿದೆ.

ಮೊದಲನೇ ದಿನ ಕ್ಷತ್ರಿಯ ಕುಲಬಾಂಧವರಿಂದ ಕರಗ ಮಹೋತ್ಸವ ಮತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, 2ನೇ ದಿನ ಗ್ರಾಮಕ್ಕೆ 108 ದೇವಾನುದೇವತೆಗಳ ಆಗಮನ, ದೇವತೆಗಳಿಗೆ ಬೆಲ್ಲದ ಆರತಿ ಹಾಗೂ ವಿಜಯಕಾಳಿಕ ಬಸಪ್ಪನವರ ಆಗಮನ, ವಿಶೇಷ ಪೂಜೆ ಕಾರ್ಯಕ್ರಮ, 3ನೇ ದಿನ ಗ್ರಾಮ ದೇವತೆಗೆ ಪಾಯಪೂಜೆ ನೆರವೇರಿಸಲಾಗುತ್ತದೆ.

4ನೇ ದಿನ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಭಕ್ತರಹಳ್ಳಿಯಿಂದ ಮಲ್ಲಸಂದ್ರ, ಕೊರಳೂರು, ತಿರುಮಲಶೆಟ್ಟಳ್ಳಿ ಮಾರ್ಗದೊಂದಿಗೆ ಹೊಸಕೋಟೆಗೆ ಹಾಗೂ ದೊಡ್ಡಗಟ್ಟಿಗನಬೆ ಪೂಜೆನಅಗ್ರಹಾರ ಗ್ರಾಮಗಳಲ್ಲಿ ಮೆರವಣಿಗೆ ನಡೆಯಲಿದೆ. ಕಡೆಯ ದಿನ ತಂಬಿಟ್ಟು ಆರತಿ ಹಾಗೂ ಬಲಿ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ಪ್ರಧಾನ ಅರ್ಚಕ ರವಿಕುಮಾರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-15-1587628260

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.