ಓಬಳಾಪುರ(ಹೊಸಕೋಟೆ): ತಾಲ್ಲೂಕಿನ ಅನುಗೊಂಡಹಳ್ಳಿ ಹೋಬಳಿಯ ಓಬಳಾಪುರದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗುವಂತೆ ಪರಿಶಿಷ್ಟರ ನೇತೃತ್ವದಲ್ಲಿ ಬಿಸಿಲು ಮಾರಮ್ಮ ದೇವಿ ಜಾತ್ರಾ ಮಹೋತ್ಸವ ವೈಭವದಿಂದ ನೆರವೇರಿತು.

ದಲಿತ ಸಮುದಾಯದವರು ಬಿಸಿಲು ಮಾರಮ್ಮ ದೇವಿ ತೇರು ಎಳೆದು ಸಂಭ್ರಮಿಸಿದರು. ನಂತರ ದಲಿತ ಸಮುದಾಯದ ಮುಖಂಡರು ಮಹಿಳೆಯರು, ಯುವಕರು ಮತ್ತು ಕುಟುಂಬಸ್ಥರು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ದಲಿತ ಕುಟುಂಬಗಳ ಹಿರಿಯರು ದೇವಿಗೆ ಮಂಗಳಾರತಿ ಬೆಳಗಿ, ಸಕಲ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು.

ಮಹೋತ್ಸವ ಪ್ರಯುಕ್ತ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ದೇವಿಯ ಉತ್ಸವ ಮೂರ್ತಿ ಭವ್ಯ ಮೆರವಣಿಗೆ ನಡೆಯಿತು. ಕರಗ, ಕಂಸಾಳೆ, ಡೊಳ್ಳು ಕುಣಿತ ಮತ್ತು ತಮಟೆ ವಾದನಗಳ ನಾದಕ್ಕೆ ಭಕ್ತರು ಹೆಜ್ಜೆ ಹಾಕಿದರು.

ಜಾತ್ರೆ ಅಂಗವಾಗಿ ರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆದವು. ಭಕ್ತಿಗೀತೆಗಳ ಗಾಯನ, ಸ್ಥಳೀಯ ಕಲಾವಿದರಿಂದ ನಾಟಕ ಪ್ರದರ್ಶನ ಮತ್ತು ಯುವಕರಿಂದ ನೃತ್ಯ ಪ್ರದರ್ಶನಗಳು ಜರುಗಿದವು. ಇಡೀ ಗ್ರಾಮವು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಓಬಳಾಪುರ ಶ್ರೀನಿವಾಸ್, ವಕೀಲರು ಅಂಬರೀಶ್, ಚೇತನ್(ಧನರಾಜು) ಲಕ್ಷ್ಮಯ್ಯ, ವೆಂಕಟಸ್ವಾಮಿ. ಆನಂದ್. ಕಿಶೋರ್. ಚಂದ್ರು ಪೂಜಾರಿ, ಮಲ್ಲಿಕಾರ್ಜುನ್, ನಂದಪ್ಪ, ಸ್ವರೂಪ್, ರಘುನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-15-920194752

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.