ದೊಡ್ಡಗಟ್ಟಿಗನಬ್ಬೆ(ಹೊಸಕೋಟೆ): ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಕಲಿ ಸಹಿ ಮತ್ತು ಸುಳ್ಳು ದಾಖಲೆ ಸೃಷ್ಟಿಸಿ ಪೂಜೇನ ಅಗ್ರಹಾರದ ಕೃಷಿ ಜಮೀನಿನಲ್ಲಿ ದೊಡ್ಡ ಪ್ರಮಾಣದ ಕಾಂಕ್ರೀಟ್ ಮಿಕ್ಸಿಂಗ್ ಘಟಕ ಸ್ಥಾಪಿಸಲಾಗಿದೆ.

ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಘಟಕಕ್ಕೆ ನಕಲಿ ಪರವಾನಗಿ ಪತ್ರ, ರಶೀದಿ ನೆರವಿನಿಂದ ವಿದ್ಯುತ್ ಪರಿವರ್ತಕ ಮತ್ತು ಸಂಪರ್ಕವನ್ನೂ ಪಡೆಯಲಾಗಿದೆ.

ಆಶೀರ್ವಾದ್ ಇನ್ಫ್ರಾಕಾರ್ಪೋರೇಷನ್ ರೆಡಿ ಸಿಮೆಂಟ್ ಮಿಕ್ಸ್ ಘಟಕ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಹಲವು ಬಾರಿ ನೋಟಿಸ್ ನೀಡಿದೆ. ಅದಕ್ಕೆ ಘಟಕದ ಮಾಲೀಕ ಸೊಪ್ಪು ಹಾಕಿಲ್ಲ.

ಈ ನಡುವೆ ತಮ್ಮ ಸಹಿ ನಕಲಿ ಮಾಡಲಾಗಿದೆ ಮತ್ತು ಪಂಚಾಯಿತಿ ಹೆಸರಲ್ಲಿ ನಕಲಿ ಪರವಾನಗಿ ದಾಖಲೆ ಸೃಷ್ಟಿಸಲಾಗಿದೆ ಎಂದು ಹಿಂದಿನ ಮತ್ತು ಹಾಲಿ ಪಿಡಿಒ ದೂರು ನೀಡಲು ಮುಂದಾಗಿದ್ದಾರೆ.

ಕಳೆದ ವರ್ಷ ಮೇ 26ರಂದು ವಸಂತ್ ಎಂಬುವರು ಪೂಜೇನ ಅಗ್ರಹಾರದಲ್ಲಿ ಆಶೀರ್ವಾದ್ ಇನ್ಫಾ ಕಾರ್ಪೊರೇಷನ್ ಕಾಂಕ್ರೀಟ್ ಮಿಕ್ಸಿಂಗ್ ಘಟಕ ಆರಂಭಿಸಿದ್ದಾರೆ. ಗ್ರಾಮದಲ್ಲಿ ನಿತ್ಯ ನೂರಾರು ಕ್ರಶರ್ ವಾಹನ ಓಡಾಡುವ ಕಾರಣ ಧೂಳು ಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಕ್ಷೆಯೂ ನಕಲಿ:ಕಾರ್ಖಾನೆ ಸ್ಥಾಪನೆಗೂ ಮುನ್ನ ಗ್ರಾಮಸಭೆಯಲ್ಲಿ ಅನುಮತಿ ಪಡೆಯಬೇಕೆಂಬ ನಿಯಮವಿದ್ದರೂ ಯಾವುದೇ ಸಭೆ ನಡೆಸದೆ ಸಿಮೆಂಟ್ ಮಿಕ್ಸಿಂಗ್ ಘಟಕ ಸ್ಥಾಪಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವುದೇ ಮಾರ್ಗಸೂಚಿಗಳನ್ನೂ ಪಾಲಿಸಿಲ್ಲ. ಇಲ್ಲಿಯೂ ಸಹ ನಕಲಿ ದಾಖಲೆ ನೀಡಿ ಪರವಾನಗಿ ಪಡೆಯಲಾಗಿದೆ ಎನ್ನುತ್ತಾರೆ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್. ಸುರೇಶ್.

ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಲು ಬೇಕಾದ ಕಾನೂನುಬದ್ಧ ಅನುಮತಿ ಪಡೆಯದೆ ನಕಲಿ ನಕ್ಷೆ ಮತ್ತು ಸುಳ್ಳು ದಾಖಲೆಗಳ ಆಧಾರದ ಮೇಲೆ ನಿರಪೇಕ್ಷಣಾ ಪತ್ರ(ಎನ್ಒಸಿ) ಪಡೆದಿರುವುದು ದಾಖಲೆಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎನ್ನುವುದು ಅವರ ಅಭಿಪ್ರಾಯ.

ಪಂಚಾಯಿತಿಯ ಅಧಿಕಾರಿಗಳೊಂದಿಗೆ ಪ್ರಭಾವಿಗಳು ಕೈಜೋಡಿಸಿ ನಕಲಿ ದಾಖಲೆ ಸೃಷ್ಟಿಸಿ ಕಾರ್ಖಾನೆಗೆ ಪರವಾನಗಿ ಪಡೆಯಲಾಗಿದೆ. ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಕಲಿ ಸಹಿ ಬಳಸಿ ಜನರಲ್ ಲೈಸೆನ್ಸ್ ಸೃಷ್ಟಿಸಲಾಗಿದೆ. ₹40 ಸಾವಿರ ತೆರಿಗೆ ಪಾವತಿಸಿರುವ ರೀತಿ ನಕಲಿ ರಶೀದಿ ಸಷ್ಟಿಸಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಎನ್ನುತ್ತಾರೆ ಕರ್ನಾಟಕ ಮಹಾ ಜನಸೇನೆ ರಾಜ್ಯಾಧ್ಯಕ್ಷ ಎಂ.ವಿ.ಮಂಜುನಾಥ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-15-261554398

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.