ಶನಿವಾರ, 13 ಜೂನ್ 2026
×
ADVERTISEMENT

ಮಳೆ ಬಂದರೆ ಕೆರೆಯಾಗುವ ನಗರ: ಪ್ರತಿ ಮಳೆಗಾಲಕ್ಕೂ ಹೊಸಕೋಟೆ ಜನರ ವ್ಯಥೆ ಇದು

ರವೀಶ್ ಜಿ.ಎನ್
Published : 25 ಮೇ 2026, 0:01 IST
Last Updated : 25 ಮೇ 2026, 5:43 IST
ADVERTISEMENT
ಫಾಲೋ ಮಾಡಿ
Comments
ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ರಸ್ತೆಗಳೇ ವಾಹನ ನಿಲುಗಡೆ ಸ್ಥಳ. ಆಗಲೋ ಈಗಲೋ ಬೀಳುವ ಹಂತದಲ್ಲಿರುವ ಚರಂಡಿಗಳ ಮೇಲೆ ಪಾದಚಾರಿಗಳ ಓಡಾಟ, ಮಳೆ ಬಂದರೆ ಕೆಸರಿನ ರಾಡಿಯ ಮೇಲೆ ವಾಹನಗಳು ಮತ್ತು ಪಾದಚಾರಿಗಳ ಸರ್ಕಸ್, ಚರಂಡಿಗಳು ಮತ್ತು ರಸ್ತೆಗಳೇ ಕಸ ಸುರಿಯುವ ತಾಣ. ಇದು ಆಡಳಿತ ವರಗದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಶ್ರೀನಿವಾಸ್, ಬೈಕ್ ಸವಾರ
ಲೋಕಾಯುಕ್ತಗೆ ದೂರು ಅವೈಜ್ಞಾನಿಕ ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಹಲವು ವರ್ಷಗಳಿಂದ ನಗರಸಭೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಬೇಸತ್ತು ಲೋಕಾಯುಕ್ತರಿಗೆ ದೂರುಸಲ್ಲಿಸಿದ್ದೇನೆ. ಶೀಘ್ರದಲ್ಲೇ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಜರಿಗಿಸುವ ಭರವಸೆಯನ್ನು ಲೋಕಾಯುಕ್ತ ಅಧಿಕಾರಿಗಳು ನೀಡಿದ್ದಾರೆ
ವೆಂಕಟೇಶ್ ಶಾಸ್ತ್ರಿ, ಹೊಸಕೋಟೆ
ಅವೈಜ್ಞಾನಿಕ ಕಾಮಗಾರಿ ಮಳೆ ಬಂದರೆ ನಗರದ ಮುಖ್ಯ ರಸ್ತೆಗಳೆ ಚರಂಡಿ ನೀರಿನಿಂದ ಕೆಸರಿನ ರಾಡಿಯಾಗುತ್ತದೆ. ಕೆಲವು ಕಡೆ ರಸ್ತೆಗಳನ್ನು ಚರಂಡಿ ಇಲ್ಲದಿರುವಂತೆ ನಿರ್ಮಿಸಲಾಗಿದೆ. ಮತ್ತೆ ಹಲವು ಕಡೆ ರಸ್ತೆಗೂ ಚರಂಡಿಗೂ ಸಂಬಂಧವೇ ಇಲ್ಲ ಎನ್ನುವಂತೆ ಕಾಮಗಾರಿ ನಡೆಸಲಾಗಿದೆ. ಇದರಿಂದ ಮಳೆ ನೀರು ಎಲ್ಲೆಂದರಲ್ಲಿ ನುಗ್ಗುತ್ತದೆ. ಆಗ ಸವಾರರು ಸರ್ಕಸ್ ಮಾಡಬೇಕು.
ಸುರೇಶ್, ಪಾದಚಾರಿ
ಬರಲಿದೆ ದೊಡ್ಡ ಆಪತ್ತು ನಗರದಲ್ಲಿ ರಾಜಕಾಲುವೆಗಳ ಅಕ್ರಮ ಒತ್ತುವರಿ ತೆರವುಗೊಳಿಸುವ ಬದಲು ಅಕ್ರಮಗಳನ್ನು ಸಕ್ರಮಗೊಳಿಸುತ್ತಿರುವುದು ಸರಿಯಲ್ಲ. ಇದರಿಂದಲೇ ನಗರಕ್ಕೆ ಚರಂಡಿ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಮುಂದೊಂದುದಿನ ದೊಡ್ಡ ಆಪತ್ತು ತರಲಿದೆ.
ವರದಾಪುರ ನಾಗರಾಜು, ವರದಾಪುರ
ಸಮನ್ವಯ ಕೊರತೆ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಹೇಳಲು ಹೋದರೆ ಇದು ನಮ್ಮ ವ್ಯಾಪ್ತಿಗೆ ಸೇರಿದ್ದಲ್ಲ ಎಂದು ಪರಸ್ಪರ ಬೆರಳು ತೋರುತ್ತಾ ಕಾಲಹರಣ ಮಾಡುತ್ತಿದ್ದಾರೆ. ತಾಲ್ಲೂಕು ಆಡಳಿತ, ನಗರ ಸಭೆ ಹಾಗೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರತಿನಿದಿಗಳ ಸಮನ್ವಯ ಕೊರತೆಯಿಂದ ಸಮಸ್ಯೆ ಬೇಗ ಪರಿಹಾರ ಸಿಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
ನಗರೀಕರಣ ಒತ್ತುವರಿ ಭೂತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT