ಹೊಸಕೋಟೆ: ನಗರದ ಸಮೀಪದ ನಿಂಬೆಕಾಯಿಪುರದ ಜನಪದರು ರಂಗ ಮಂದಿರದಲ್ಲಿ ಜನಪದರು ಸಾಂಸ್ಕೃತಿಕ ವೇದಿಕೆಯ ರಂಗಮಾಲೆ 106ರ ಅಂಗವಾಗಿ ನೀರಗನ್ನಡಿ ನಾಟಕವನ್ನು ಸುರಾನ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಪ್ರದರ್ಶನ ನೀಡಿದರು.

ಕೆ.ವೈ ನಾರಾಯಣಸ್ವಾಮಿ ಅವರು ಕೋಲಾರ ಜಿಲ್ಲೆಯ ಜಾನಪದ ಕತೆಯೊಂದನ್ನು ಆಧಾರವಾಗಿರಿಸಿಕೊಂಡು ರಚಿಸಿದ ನೀರಗನ್ನಡಿ ನಾಟಕವನ್ನು ಕಿರುತೆರೆ ಮತ್ತು ಸಿನೆಮಾ ನಿರ್ದೇಶಕರ ಬಿ.ಸುರೇಶ ನಿರ್ದೇಶನ ಹಾಗೂ ಎಂ.ಡಿ ಪಲ್ಲವಿ ಅವರ ಸಂಗೀತದಲ್ಲಿ ಬೆಂಗಳೂರಿನ ನಟರಂಗ ತಂಡದಿಂದ ಸುರಾನ ಕಾಲೇಜಿನ ವಿದ್ಯಾರ್ಥಿಗಳು ಆಕರ್ಷಕವಾಗಿ ನಡೆಸಿಕೊಟ್ಟರು. ರಂಗ ಪರಿಕರಗಳು ರಂಗ ಸಜ್ಜಿಕೆ, ವೇಷಭೂಷಣ ನಾಟಕಕ್ಕೆ ಮೆರುಗು ತಂದುಕೊಟ್ಟವು.

ಜನಪದರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕಾಟಂ ನಲ್ಲೂರು ಪಾಪಣ್ಣ, ಕಾರ್ಯದರ್ಶಿ ಸಿದ್ಧೇಶ್ವರ ನನಸುಮನೆ, ಎಂ.ಸುರೇಶ್, ಎಚ್.ಆರ್ ಮಮತಾ, ಮುನಿರಾಜು ಬಿದರೇ ಅಗ್ರಹಾರ, ಶಿವಕುಮಾರ್ ಕಾಟಂನಲ್ಲೂರು, ಶಿವಕುಮಾರ್ ತಾವರೇಕೆರೆ, ನಿತಿನ್, ಕೃಷ್ಣ ಸುರೇಶ, ರಾಜಣ್ಣ ಕಾಟಂನಲ್ಲೂರು, ಮಹೇಶ್, ವೆಂಕಟಾಚಲಪತಿ, ನಾಗೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-15-1553867950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.