ಹೊಸಕೋಟೆ: ನಗರದ ವಾಲ್ಮೀಕಿ ಸಮುದಾಯ ಭವನ ಆವರಣ ಕಸ ಸುರಿಯುವ ಜಾಗವಾಗಿ ಮಾರ್ಪಟ್ಟಿದ್ದು, ಭವನದ ಸುತ್ತಲೂ ಕಲ್ಲು, ಮಣ್ಣು, ಕಸ ಸುರಿಯಲಾಗುತ್ತಿದೆ. ಹೀಗಿದ್ದರೂ ನಗರಸಭೆ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.

₹2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ವಾಲ್ಮೀಕಿ ಸಮುದಾಯ ಭವನವನ್ನು ಏಂಟು ತಿಂಗಳಷ್ಟೇ ಉದ್ಘಾಟನೆ ಮಾಡಲಾಗಿದೆ. ಆದರೆ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ತೆರವುಗೊಳಿಸದೆ ಹಾಗೇ ಬಿಡಲಾಗಿದೆ.

ಉದ್ಘಾಟನೆ ಸಂದರ್ಭದಲ್ಲೂ ತರಾತುರಿಯಲ್ಲಿ ಭವನದ ಸುತ್ತಲೂ ಕಾಟಾಚಾರಕ್ಕೆ ಸಿಮೆಂಟ್ ಸ್ಲ್ಯಾಬ್ ಅನ್ನು ಕಾಂಪೌಂಡ್ ಗೋಡೆಯಂತೆ ನಿಲ್ಲಿಸಲಾಗಿತ್ತು. ಆದರೆ ಅದಕ್ಕೊಂದು ಪ್ರವೇಶ ದ್ವಾರ ಅಥವಾ ಗೇಟ್ ನಿರ್ಮಾಣ ಮಾಡಲಿಲ್ಲ. ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿಲ್ಲ. ಹೀಗೆ ನಿರ್ಲಕ್ಷ್ಯವಾಗಿ ಕಾಮಗಾರಿ ಅಪೂರ್ಣ ಕಾಮಗಾರಿ ನಡೆಸಿರುವುದು ವಾಲ್ಮೀಕಿ ಸಮುದಾಯಕ್ಕೆ ಮಾಡುತ್ತಿರುವ ಅಪಮಾನ ಎಂದು ಸಮುದಾಯದ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ.

ವಾಲ್ಮೀಕಿ ಭವನವು ಸಮುದಾಯದ ಏಳಿಗೆ ಬಳಕೆಯಾಗಬೇಕೆ ಹೊರತು ಅನ್ಯಕಾರ್ಯಕ್ಕಲ್ಲ. ಈ ಕುರಿತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿದ್ದು, ಕೂಡಲೇ ತ್ಯಾಜ್ಯ ತೆರವು ಮಾಡಿಸುವ ಭರವಸೆ ನೀಡಿದ್ದಾರೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯಾಧ್ಯಕ್ಷ ಸುಬ್ರಮಣಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-15-1854662932

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.