ಕರುಣಾನಿಧಿ ನಿಧನ: ಹೊಸೂರು ಬಂದ್‌

7

ಕರುಣಾನಿಧಿ ನಿಧನ: ಹೊಸೂರು ಬಂದ್‌

Published:
Updated:

ಆನೇಕಲ್: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಿಧನದ ಕಾರಣ ನೆರೆಯ ಹೊಸೂರು ಸಂಪೂರ್ಣ ಬಂದ್ ಆಗಿತ್ತು. ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸದಾ ಗಿಜುಗುಟ್ಟುತ್ತಿದ್ದ ರಾಷ್ಟ್ರೀಯ ಹೆದ್ದಾರಿ 7ರ ಹೊಸೂರು–ಅತ್ತಿಬೆಲೆ ರಸ್ತೆ ಬಿಕೊ ಎನ್ನುತ್ತಿತ್ತು.

ಕೆಎಸ್ಆರ್‌ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳು ಸೇರಿದಂತೆ ವಾಹನಗಳು ತಮಿಳುನಾಡಿಗೆ ಸಂಚರಿಸಲಿಲ್ಲ. ಎಲ್ಲ ವಾಹನಗಳು ಅತ್ತಿಬೆಲೆ ಗಡಿವರೆಗೆ ಬಂದು ಗಡಿಯಲ್ಲಿ ನಿಲ್ಲುತ್ತಿದ್ದವು.

ವಾಣಿಜ್ಯ ಕೇಂದ್ರವಾದ ಹೊಸೂರು ಸಂಪೂರ್ಣ ಸ್ತಬ್ಧವಾಗಿತ್ತು. ಕೈಗಾರಿಕೆಗಳು, ಹೋಟೆಲ್‌ಗಳು, ಶಾಲಾ–ಕಾಲೇಜುಗಳು ಮುಚ್ಚಿದ್ದವು. ತಮಿಳುನಾಡಿನ ಹೊಸೂರು, ಥಳಿ, ಮದಗೊಂಡಪಲ್ಲಿ ಸೇರಿದಂತೆ ವಿವಿಧ ಗಡಿಭಾಗಗಳಿಂದ ರಾಜ್ಯದ ವಿವಿಧ ಶಾಲಾ ಕಾಲೇಜುಗಳಿಗೆ ನೂರಾರು ಮಂದಿ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳು ಪರದಾಡಿದರು.

ಅತ್ತಿಬೆಲೆ ಗಡಿಯಲ್ಲಿ ಬೆಳಿಗ್ಗೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ವಾಹನ ಸಂಚಾರ ಸುಗಮವಾಗಿ ನಡೆಯಲಿದೆ ಎಂದು ಅತ್ತಿಬೆಲೆ ಸರ್ಕಲ್ ಇನ್ಸ್‌ಪೆಕ್ಟರ್ ಎಲ್.ವೈ.ರಾಜೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !