ಹೊಸಕೋಟೆ: ತಾಲ್ಲೂಕಿನ ದೇವನಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡದುನ್ನಸಂದ್ರ ಸರ್ಕಲ್ ಬಳಿ ಇರುವ ಕಟ್ಟಡವೊಂದರಲ್ಲಿ ಬುಧವಾರ ಮಧ್ಯಾಹ್ನ ಏಕಾಏಕಿ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸಲಾಗಿದೆ. ಈ ಪ್ರದೇಶದಲ್ಲಿ ಶಾಲೆ, ದೇವಸ್ಥಾನ, ಆಸ್ಪತ್ರೆ ಮತ್ತು ವಸತಿ ನಿವೇಶನಗಳಿರುವುದರಿಂದ ಮದ್ಯದಂಗಡಿ ಆರಂಭವನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸಿದ್ದಾರೆ.

ಬಾರ್ ಸಮೀಪವೇ ಶಾರದಾ ವಿದ್ಯಾಮಂದಿರ ಶಾಲೆ (100 ಮೀ), ಗಣೇಶ ದೇವಸ್ಥಾನ (40 ಮೀ) ಹಾಗೂ ಎರಡು ಆಸ್ಪತ್ರೆಗಳು (60 ಮೀ) ಇವೆ. ಹೀಗಿದ್ದರೂ ದೇವನಗುಂದಿ ಗ್ರಾಮ ಪಂಚಾಯಿತಿ ಎನ್ಒಸಿ ನೀಡಿರುವುದು ಮತ್ತು ಅಬಕಾರಿ ಇಲಾಖೆ ಸ್ಥಳ ಮಹಜರು ನಡೆಸದೆ ಅನುಮತಿ ನೀಡಿರುವುದು ಸ್ಥಳೀಯರ ಪ್ರಶ್ನೆಗೆ ಕಾರಣವಾಗಿದೆ.

ಬಾರ್ ತೆರೆದ ತಕ್ಷಣ ಸ್ಥಳೀಯರು, ಪೋಷಕರು ಹಾಗೂ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಪರಿಣಾಮ ಮಧ್ಯಾಹ್ನದ ವೇಳೆ ಬಾರ್ ಮುಚ್ಚಲಾಯಿತು. ಆದರೆ, ಸಂಜೆ ಮತ್ತೆ ತೆರೆಯಲು ಮುಂದಾದಾಗ ಸಾರ್ವಜನಿಕರು ಮತ್ತೊಮ್ಮೆ ಪ್ರತಿಭಟಿಸಿದರು. ಮತ್ತೆ ಮದ್ಯದಂಗಡಿ ಮುಚ್ಚಬೇಕಾಯಿತು.

ಗ್ರಾಮ ಪಂಚಾಯಿತಿ ಈ ಹಿಂದೆಯೇ ಬಾರ್ ಮಾಲೀಕರಿಗೆ ಸಮಸ್ಯೆ ಇತ್ಯರ್ಥವಾಗುವವರೆಗೆ ಮದ್ಯಂಗಡಿ ತೆರೆಯಬೇಡಿ ಎಂದು ನೋಟಿಸ್ ನೀಡಿತ್ತು. ಆದರೂ, ಗ್ರಾಮ ಪಂಚಾಯಿತಿ ಸೂಚನೆ ಲೆಕ್ಕಿಸದೆ ಬಾರ್ ತೆರೆಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಗೌಡ, ಈ ಪ್ರದೇಶದಲ್ಲಿ ಮದ್ಯ ಮಾರಾಟ ಕೇಂದ್ರ ತೆರೆದರೆ ಸಾಮಾಜಿಕ ಮತ್ತು ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಿವಾಸಿ ಅನುರೆಡ್ಡಿ, ‘ಬಾರ್ ಸಮೀಪದಲ್ಲೇ ಶಾಲೆ, ದೇವಸ್ಥಾನ, ಆಸ್ಪತ್ರೆ ಮತ್ತು ಜಂಕ್ಷನ್ ಇದೆ. ಮದ್ಯದಂಗಡಿಗೆ ಬರುವವರು ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಾರೆ. ಅಶ್ಲೀಲವಾಗಿ ಮಾತನಾಡುತ್ತಾರೆ. ಕುಡಿದ ಅಮಲಿನಲ್ಲಿ ತೋಳಲಾಡುವವರು ಹೆಚ್ಚಾಗುತ್ತಾರೆ. ಇಂತಹ ಸ್ಥಳದಲ್ಲಿ ಮಕ್ಕಳು ಮತ್ತು ಮಹಿಳೆಯರು ಹೇಗೆ ಸಂಚರಿಸಬೇಕು’ ಎಂದು ಪ್ರಶ್ನಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಬಾರ್ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಶೃಂಗ ಸಂಸ್ಥೆ ಅಧ್ಯಕ್ಷ ಮರೇಗೌಡ, ಮಂಜುನಾಥ್ ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ್ ಕುಮಾರ್, ವೆಂಕಟೇಶ್, ಎಚ್.ಇ ಮಂಜುನಾಥ್, ಶಂಕರ್, ಫತೆಸಿಂಗ್, ಹೇಮಂತ್ ಮುಂತಾದವರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-15-1528270150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.