ಹೊಸಕೋಟೆ: ನಗರದ ಸಿಐಟಿಯು ಕಚೇರಿ ಬಳಿ ತಾಲ್ಲೂಕಿನ ಕಾರ್ಮಿಕರು ಮತ್ತು ದುಡಿಯುವ ವರ್ಗ ಸೇರಿ ವಿಶ್ವ ಕಾರ್ಮಿಕರ ದಿನ ಆಚರಿಸಿದವು. ಕೆಂಪು ಧ್ವಜ ಹಾರಿಸಿ ತಾಲ್ಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಹೂ ಮಾಲೆ ಹಾಕಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದ ಬೆನ್ನೆಲುಬಾಗಿ ದುಡಿಯುವ ಕಾರ್ಮಿಕರ ವಿರೋಧಿ ಶಾಸನಗಳನ್ನು ಜಾರಿಗೆ ತರುತ್ತಿವೆ ಎಂದು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಸಿಐಟಿಯುನ ತಾಲ್ಲೂಕು ಕಾರ್ಯದರ್ಶಿ ಮೋಹನ್ ಬಾಬು, ‘ಕಾರ್ಮಿಕರನ್ನು ಕೋಟ್ಯಧಿಪತಿಯಾಗಿ ಮಾಡಿ ಎಂದು ಯಾವ ಸರ್ಕಾರವನ್ನು ಕೇಳುತ್ತಿಲ್ಲ. ಘನತೆಯಿಂದ ಕಾರ್ಮಿಕ ವರ್ಗ ಮತ್ತು ಅವರ ಕುಟುಂಬ ಬದುಕವ ಕನಿಷ್ಠ ಸೌಲಭ್ಯ ಕಲ್ಪಿಸಿ ಎಂದು ಕೇಳುತ್ತಿದ್ದೇವೆ’ ಎಂದರು.

ಕಾರ್ಮಿಕರು ಯಂತ್ರಗಳಲ್ಲ, ಮನುಷ್ಯರು. ಎಷ್ಟು ಗಂಟೆ ಬೇಕದರೂ ಕೆಲಸ ಮಾಡಲು ಆಗದು. ನಿರಂತರ ಒತ್ತಡದಲ್ಲಿ ಕೆಲಸ ಮಾಡಿದರೆ ಆಗುವ ಮಾನಸಿಕ ಮತ್ತು ದೈಹಿಕ ಧಣಿವು ಸರ್ಕಾರಕ್ಕೆ ಗೊತ್ತಿಲ್ಲವೇ?, 8 ಗಂಟೆ ಕೆಲಸದ ಅವಧಿಯನ್ನು ಬದಲಿಸಿ ಮತ್ತೆ ನಮ್ಮನ್ನು ಪುನಃ ಬ್ರಿಟಿಷರ ಕಾಲದಲ್ಲಿ ಕಾರ್ಮಿಕರು ಅನುಭವಿಸುತ್ತಿದ್ದ ಸ್ಥಿತಿಗೆ ತಳ್ಳುವ ಹುನ್ನಾರವನ್ನು ಸರ್ಕಾರ ಮತ್ತು ಬಂಡವಾಳ ಶಾಹಿಗಳು ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಹರಿಂದ್ರ, ಕಾರ್ಮಿಕರ ಶ್ರಮ ಎಂದರೆ ಕೇವಲ ಅವರ ಬೆವರಲ್ಲ, ಅದು ಅವರ ರಕ್ತದ ಶ್ರಮ ಎಂಬುದರ ಸಂಕೇತವಾಗಿ ಹೋರಾಟಕ್ಕೆ ಕೆಂಪು ಭಾವುಟವನ್ನು ಬಳಸಲಾಗುತ್ತಿದೆ. ಆದ್ದರಿಂದ ದೇಶದ ಪ್ರಗತಿಗೆ ಬೆವರು ಮತ್ತು ರಕ್ತವನ್ನು ಸವೇಸುತ್ತಿರುವ ಕಾರ್ಮಿಕರಿಗೆ ಈ ದೇಶದ ಸರ್ಕಾರಗಳು ಕೊಡುವ ಗೌರವ ಎಂತದ್ದು ಎಂದು ಪ್ರಶ್ನಿಸಬೇಕಿದೆ ಎಂದರು.

ಸಿಐಟಿಯು ತಾಲ್ಲೂಕು ಖಜಾಂಚಿ ವೆಂಕಟರಾಜು, ಮುನಿರಾಜು, ಕಾರ್ಮಿಕರು,ಸಂಘ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-15-722934026

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.