ಹೆಬ್ಬಗೋಡಿ (ಆನೇಕಲ್): ಹೆಬ್ಬಗೋಡಿ ಸಮೀಪದ ಹುಸ್ಕೂರು ಮದ್ದೂರಮ್ಮ ದೇವಾಲಯದ ಜಾತ್ರಾ ಮಹೋತ್ಸವದ ಪ್ರಯುಕ್ತ ಧರ್ಮರಾಯ, ದ್ರೌಪದಮ್ಮ ಕರಗ ಮಹೋತ್ಸವ ಭಾನುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಸುತ್ತಮುತ್ತಲ ಗ್ರಾಮಗಳ ಭಕ್ತರು ವೈಭವದ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು.

ಧರ್ಮರಾಯ,ದ್ರೌಪದಮ್ಮ ದೇವಾಲಯದಲ್ಲಿ ರಾತ್ರಿ 1.30ಕ್ಕೆ ಕರಗ ಹೊತ್ತ ಹರಿಪ್ರಸಾದ್ ಮೊಣಕಾಲಿನಲ್ಲಿ ದೇವಾಲಯದಿಂದ ಹೊರ ಬರುತ್ತಿದ್ದಂತೆ ಭಕ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ಗಂಟೆ, ತಮಟೆ, ಡಮರುಗದ ಸದ್ದಿನೊಂದಿಗೆ ಕರಗ ಬರಮಾಡಿಕೊಳ್ಳಲಾಯಿತು. ವೀರಕುಮಾರರು ಕತ್ತಿಯಿಂದ ಅಲಗು ಸೇವೆ ಮಾಡಿ ಡಿಕ್ ಡೀ ಡಿಕ್ ಡೀ ಎಂದು ಕೂಗುವ ಮೂಲಕ ಕರಗವನ್ನು ಸ್ವಾಗತಿಸಿದರು. ಭಕ್ತರು ಗೋವಿಂದ ಗೋವಿಂದ ಎಂದು ಘೋಷಣೆ ಕೂಗಿ ಕರಗದ ಉತ್ಸಾಹವನ್ನು ಹೆಚ್ಚಿಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗ ಸಂಚರಿಸಿತು. ದೇವಾಲಯದ ಸಮೀಪದ ವಿಶಾಲ ಬಯಲಿನಲ್ಲಿ ತಮಟೆಯ ಸದ್ದಿಗೆ ತಕ್ಕಂತೆ ಕರಗ ಹೊತ್ತವರು ಹೆಜ್ಜೆ ಹಾಕಿದರು. ಕರಗ ಶಕ್ತೋತ್ಸವದ ಹಿನ್ನೆಲೆಯಲ್ಲಿ ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿತ್ತು.

ಹುಸ್ಕೂರು ಸುತ್ತಮುತ್ತಲಿನ 17 ಗ್ರಾಮಗಳಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು ಪ್ರತಿ ಗ್ರಾಮಗಳಲ್ಲಿಯೂ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಶುಕ್ರವಾರ ಆರಂಭವಾದ ಜಾತ್ರೆ ನಾಲ್ಕು ದಿನ ವಿಜೃಂಭಣೆಯಿಂದ ನಡೆದಿದ್ದು, ಮಂಗಳವಾರ ತೆರೆ ಬೀಳಲಿದೆ. ಕುರ್ಜುಗಳು ಮಾರ್ಚ್ 17ರಂದು ಸ್ವಗ್ರಾಮಗಳಿಗೆ ಮರಳಲಿವೆ.

ಹುಸ್ಕೂರು ಮದ್ದೂರಮ್ಮ ಜಾತ್ರೆ ಮತ್ತು ಕುರ್ಜುಗಳ ಸೌಂದರ್ಯ ಕುರಿತು ಹಲವಾರು ಬ್ಲಾಗರ್ಗಳು ಮಾಡಿರುವ ವಿಡಿಯೊಗಳು ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.