ಹೆಬ್ಬಗೋಡಿ (ಆನೇಕಲ್): ಹೆಬ್ಬಗೋಡಿ ಸಮೀಪದ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯು ಮಾರ್ಚ್ 13ರಿಂದ ಆರಂಭಗೊಳ್ಳಲಿದ್ದು, ಜಾತ್ರೆಗೆ ಈ ವರ್ಷ 17 ಗ್ರಾಮಗಳ ಕುರ್ಜುಗಳು(ತೇರುಗಳು) ಆಗಮಿಸುತ್ತಿವೆ ಎಂದು ಹುಸ್ಕೂರು ಮದ್ದೂರಮ್ಮ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಪಾಪಣ್ಣ ತಿಳಿಸಿದರು.

ಹುಸ್ಕೂರು ಮದ್ದೂರಮ್ಮ ದೇವಿ ದೇಗುಲದಲ್ಲಿ ಸೋಮವಾರ ಜಾತ್ರೆಯ ಮಾಹಿತಿ ಪುಸ್ತಿಕೆ ಬಿಡುಗಡೆಗೊಳಿಸಿ ಮಾತನಾಡಿ, ಹುಸ್ಕೂರು ಜಾತ್ರೆಯಲ್ಲಿ 17 ಗ್ರಾಮಗಳು ಪಾಲ್ಗೊಳ್ಳುತ್ತಿದ್ದು ಅಂದಾಜು 4-5 ಲಕ್ಷ ಭಕ್ತರು ಶನಿವಾರ ಜಮಾವಣೆಗೊಳ್ಳಲಿದ್ದಾರೆ. ಹಾಗಾಗಿ ಹುಸ್ಕೂರು ಗ್ರಾಮದಲ್ಲಿ ಅವಶ್ಯಕವಿರುವ ಎಲ್ಲಾ ಮೂಲಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮೊಬೈಲ್ ಶೌಚಾಲಯ, ಕುಡಿಯುವ ನೀರು, ಬಿಸಿಲಿನ ಬೇಗೆ ತಣಿಸಲು ಅರವಂಟಿಕೆಗಳು, ದಾಸೋಹ ಸೇರಿದಂತೆ ಭಕ್ತರಿಗೆ ಅವಶ್ಯಕವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ರತಿ ಗ್ರಾಮಗಳ ಭಕ್ತರು ಪೊಲೀಸ್ ಮತ್ತು ಜಿಲ್ಲಾಡಳಿತ ಸೂಚಿಸಿರುವ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತೇರುಗಳನ್ನು ಕಡ್ಡಾಯವಾಗಿ 80ಅಡಿಗಿಂತ ಮೇಲ್ಪಟ್ಟು ಕಟ್ಟಬಾರದು. ಕುರ್ಜುಗಳ ಸುತ್ತಲೂ ಸ್ವಯಂ ಸೇವಕರು ಜಾಗೃತಿ ಮೂಡಿಸಬೇಕು. ಪೊಲೀಸ್ ಇಲಾಖೆಯೊಂದಿಗೆ ಎಲ್ಲಾ ಸಹಕಾರ ನೀಡಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದರು.

ಜಾತ್ರೆಯ ಪ್ರಯುಕ್ತ ಮದ್ದೂರಮ್ಮ ದೇವಿಗೆ ಖಜಾನೆಯಲ್ಲಿರುವ ಚಿನ್ನ ಮತ್ತು ವಜ್ರದ ಆಭರಣಗಳನ್ನು ತೊಡಿಸುವಂತೆ ಭಕ್ತರು ಕೋರಿದ್ದಾರೆ. ಆದರೆ ಭದ್ರತೆಯ ಕಾರಣದಿಂದಾಗಿ ಜಾತ್ರೆಯು ಮುಗಿದು ನಂತರ ದೇವಿಗೆ ವಜ್ರದ ಹಾರವನ್ನು ಅಲಂಕರಿಸಲಾಗುವುದು. ಜಾತ್ರೆಯ ಪ್ರಯುಕ್ತ ಭಕ್ತರು ನೂಕು ನುಗ್ಗಲು ಮಾಡದೇ ದೇವಾಲಯಕ್ಕೆ ಭೇಟಿ ನೀಡಬೇಕು. ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ವಾಹನಗಳ ಪಾರ್ಕಿಂಗ್ ಸೇರಿದಂತೆ ವಿವಿಧ ಕ್ರಮಗಳನ್ನು ರೂಪಿಸಲಾಗಿದ್ದು ಭಕ್ತರು ನಿಯಮಗಳನ್ನು ಪಾಲಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.