ಆನೇಕಲ್: ಬಿಸಿಲಿನ ತಾಪದಿಂದ ಬಳಲುತ್ತಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿಗಳ ದಾಹ ತಣಿಸಲು ಎಳನೀರು, ಹಣ್ಣು–ತರಕಾರಿಗಳಿಂದ ತಯಾರಿಸಿದ ಲಾಲಿಪಾಪ್ ಮತ್ತು ಐಸ್ಕ್ಯಾಂಡಿ ನೀಡಲಾಗುತ್ತಿದೆ.

ಲಾಲಿಪಾಪ್ ಮತ್ತು ಐಸ್ಕ್ಯಾಂಡಿ ಕಂಡ ತಕ್ಷಣ ಚಿಕ್ಕ ಮಕ್ಕಳಂತೆ ಓಡೋಡಿ ಬರುವ ಪ್ರಾಣಿಗಳು ನಾಲಿಗೆ ಚಪ್ಪರಿಸುತ್ತವೆ. ಮಂಗಗಳಂತೂ ಐಸ್ಕ್ಯಾಂಡಿ ಮರ ಹಾಗೂ ತಮಗಿಷ್ಟ ಬಂದ ಜಾಗದಲ್ಲಿ ಕೊಂಡೊಯ್ದು ಸವಿದು ಆನಂದಿಸುತ್ತವೆ.

ಆನೆ, ಜಿಂಕೆ, ಮಂಗ, ಕರಡಿ, ಗಿಳಿ ಸೇರಿದಂತೆ ಎಲ್ಲಾ ಪ್ರಾಣಿಗಳಿಗೂ ತಂಪಾದ ಆಹಾರದ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿಗಳು ತಮ್ಮ ದೈನಂದಿನ ಆಹಾರದೊಂದಿಗೆ ಐಸ್ಕ್ಯಾಂಡಿ, ಲಾಲಿಪಾಪ್ ಸವಿಯುತ್ತಿವೆ. ಕೆಲವು ಪ್ರಾಣಿಗಳಿಗೆ ಹಣ್ಣಿನ ರಸ ಸಹ ನೀಡಲಾಗುತ್ತಿದೆ.

ಆನೆಗಳಿಗೆ ಕಲ್ಲಂಗಡಿ ಹಣ್ಣು ಇಷ್ಟ. ನೀರುಕುದುರೆಗಳಿಗೆ ತಂಪಾದ ಕಲ್ಲಂಗಡಿ ಐಸ್ಬ್ಲಾಕ್ ಮತ್ತು ಹಣ್ಣು, ಕರಡಿಗಳಿಗೆ ಮಿಶ್ರ ಹಣ್ಣು ಮತ್ತು ತರಕಾರಿಗಳ ಐಸ್ ಬ್ಲಾಕ್ ಮತ್ತು ಎಳನೀರು, ಕೋತಿಗಳಿಗೆ ಹಣ್ಣು ಮತ್ತು ತರಕಾರಿಗಳ ಐಸ್ಕ್ಯಾಂಡಿ ಮತ್ತು ಬ್ಲಾಕ್ ಎಂದರೆ ಇಷ್ಟ. ಅವುಗಳ ಇಷ್ಟದ ಆಹಾರ ಯಾವುದು ಎಂದು ಅರಿತು ಅದನ್ನೇ ನೀಡಲಾಗುತ್ತಿದೆ.

ಬಿರು ಬೇಸಿಗೆಯಲ್ಲಿ ಪ್ರಾಣಿಗಳು ತಂಪು ವಾತಾವರಣ ಬಯಸುತ್ತವೆ.ಜೀಬ್ರಾ, ಜಿರಾಫೆ, ಹುಲಿ, ಕೋತಿ, ಆನೆ ಸೇರಿದಂತೆ ಹಲವು ಪ್ರಾಣಿಗಳಿಗೆ ಸ್ಪ್ರಿಂಕ್ಲರ್ ಮೂಲಕ ತುಂತುರು ನೀರು ಸಿಂಪಡಿಸಿ ತಂಪಾದ ವಾತಾವರಣ ಕಲ್ಪಿಸಲಾಗಿದೆ. ಪಕ್ಷಿಗಳ ವಾಸಸ್ಥಳವನ್ನ ತಂಪಾಗಿರಸಲಾಗಿದೆ.

ಎರಡು ದಿನಗಳಿಂದ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಪ್ರಾಣಿಗಳ ಆವರಣದೊಳಗೆ ತುಂತುರು ನೀರು ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದೆ. ಬಿಸಿಲಿನಿಂದ ರಕ್ಷಣೆ ನೀಡಲು ನೆರಳಿನ ವ್ಯವಸ್ಥೆ ಮಾಡಲಾಗಿದೆ ಎಂದು ಉದ್ಯಾನದ ಜೀವಶಾಸ್ತ್ರಜ್ಞೆ ಐಶ್ವರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರಿನ ಅಂಶ ಹೆಚ್ಚಾಗಿರುವ ತಂಪಾದ ಆಹಾರ ಮತ್ತು ಮಂಜುಗಡ್ಡೆಗಳನ್ನು ನೀಡಿ ಪ್ರಾಣಿಗಳನ್ನು ಖುಷಿಯಾಗಿ ಇಡಲಾಗುತ್ತಿದೆ. ತುಂತುರು ನೀರು ಇಷ್ಟ ಪಡದ ಪ್ರಾಣಿಗಳಿಗೆ ಕೆಸರಿನ ವ್ಯವಸ್ಥೆ ಮಾಡಲಾಗಿದೆ. ಅವು ಕೆಸರಿನಲ್ಲಿ ಆಟವಾಡುವ ಮೂಲಕ ಬೇಗೆ ನೀಗಿಸಿಕೊಳ್ಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.