ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ:  ಸುಂದರೇಶ್ ನಾಯ್ಕ್

7
420 ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ:  ಸುಂದರೇಶ್ ನಾಯ್ಕ್

Published:
Updated:
Deccan Herald

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಿರ್ಮಿಸಲಾಗಿರುವ 450 ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮಾಡಿಕೊಡಲಾಗುವುದು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸುಂದರೇಶ್ ನಾಯ್ಕ್ ತಿಳಿಸಿದರು.

ಮನೆಗಳ ಹಂಚಿಕೆಯಾಗಿದ್ದರೂ ಮಾಲೀಕರಿಗೆ ನಗರಸಭೆ ವತಿಯಿಂದ ಹಕ್ಕು ಪತ್ರಗಳನ್ನು ವಿತರಣೆ ಮಾಡಿರಲಿಲ್ಲ. ಹೀಗಾಗಿ ಅಧಿಕೃತ ಮಾಲೀಕತ್ವ ಇಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿರಲಿಲ್ಲ. ಈಗ ನಗರಸಭೆ ವತಿಯಿಂದ 420 ಜನ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದೆ. ಈ ಎಲ್ಲ ಮನೆಗಳ ಮಾಲೀಕರಿಗೂ 1,400 ಠೇವಣಿ ಹಣ ಪಡೆದು ವಿದ್ಯುತ್ ಮೀಟರ್‌ಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಮನೆ ವಿದ್ಯುತ್ ಬಿಲ್ ಲಗತ್ತಿಸುವುದು ಕಡ್ಡಾಯವಾಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗಲಿದೆ. ಯಾರೂ ಮಧ್ಯವರ್ತಿಗಳನ್ನು ನಂಬದೆ ನೇರವಾಗಿ ಬೆಸ್ಕಾಂ ಅಧಿಕಾರಿಗಳಲ್ಲಿ ಹಣ ಪಾವತಿ ಮಾಡಿ ಸೂಕ್ತ ದಾಖಲಾತಿ ಸಲ್ಲಿಸಿದರೆ ಒಂದು ವಾರದ ಒಳಗೆ ಮೀಟರ್ ಅಳವಡಿಸಲಾಗುವುದು ಎಂದು ಹೇಳಿದರು.

ಮಧ್ಯವರ್ತಿಗಳ ಹಾವಳಿ: ರಾಜೀವ್ ಗಾಂಧಿ ಬಡವಾಣೆಯಲ್ಲಿ ಇನ್ನು ಹಲವು ಮನೆಗಳ ಹಂಚಿಕೆ, ಹಕ್ಕುಪತ್ರಗಳ ಹಂಚಿಕೆ ಮಾಡುವುದು ಬಾಕಿ ಉಳಿದಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಮಧ್ಯವರ್ತಿಗಳು ಹಕ್ಕುಪತ್ರ, ವಿದ್ಯುತ್ ಸಂಪರ್ಕ ಕೊಲ್ಪಿಸಿಕೊಡಲು ಅಮಾಯಕರಿಂದ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಸ್ಥಳೀಯ ನಿವಾಸಿ ಮಹಾದೇವ್ ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !