ವಿಪರೀತ ಚಳಿಯಿಂದ ಅನಾರೋಗ್ಯ ಹೆಚ್ಚಳ

7

ವಿಪರೀತ ಚಳಿಯಿಂದ ಅನಾರೋಗ್ಯ ಹೆಚ್ಚಳ

Published:
Updated:
Prajavani

ವಿಜಯಪುರ: ದಿನಬೆಳಗಾದರೆ ದಟ್ಟವಾಗಿ ಬೀಳುತ್ತಿರುವ ಮಂಜು, ಸಂಜೆಯಾಗುತ್ತಿದ್ದಂತೆ ಬೀಳುವ ಹಿಮದಿಂದಾಗಿ ಜನರು ತತ್ತರಿಸಿ ಹೋಗುತ್ತಿದ್ದಾರೆ.

ಒಂದು ತಿಂಗಳಿನಿಂದ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಜನರಿಗೆ ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬೆಳಿಗ್ಗೆ 9 ಗಂಟೆಯವರೆಗೂ ಹೊರಬರಲಾರದಂತಹ ಚಳಿ ಇಲ್ಲಿ ಕಾಣಿಸಿಕೊಂಡಿದೆ. ಇದರಿಂದ ವೃದ್ಧರಿಗೆ ಉಸಿರಾಟದಂತಹ ತೊಂದರೆಗಳೂ ಕಾಣಿಸಿಕೊಳ್ಳುತ್ತಿವೆ ಎಂದು ವೈದ್ಯರು ಹೇಳಿದರು.

ಸುಮಾರು 9 ಗಂಟೆಯವರೆಗೂ ಕೊರೆಯುವ ಚಳಿ ಇರುವುದರಿಂದ ಶಾಲಾ ಮಕ್ಕಳು ಶಾಲೆಗಳಿಗೆ ಹೋಗಲಿಕ್ಕೂ ತೊಂದರೆಯಾಗುತ್ತಿದೆ. ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗುವುದಕ್ಕೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹಲವರ ಆರೋಗ್ಯದಲ್ಲೂ ವ್ಯತ್ಯಾಸಗಳು ಕಾಣಿಸುತ್ತಿವೆ ಎಂದು ವಿಶ್ವನಾಥ್ ಹೇಳಿದರು.

ಚಳಿ ಹೆಚ್ಚಾಗಿದ್ದರಿಂದ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಾಪಾರಸ್ಥರು, ಚಳಿಗೆ ಧರಿಸುವಂತಹ ಸ್ವೆಟರ್, ಜರ್ಕಿನ್, ರಗ್ಗುಗಳ ಬೆಲೆ ಏರಿಕೆ ಮಾಡಿದ್ದಾರೆ. ಕೆಲ ಬೆಳೆಗಳು ರೋಗಗಳಿಗೆ ಒಳಗಾಗುತ್ತಿದ್ದು, ರೈತರು ಹೆಚ್ಚು ಔಷಧಿಗಳನ್ನು ಸಿಂಪಡಣೆ ಮಾಡುವಂತಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !