ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿಯ ಬೆಟ್ಟದ ಸಾಲಿನಲ್ಲಿ ಅಪರೂಪದ ಕೊಂಬಿನ ಗೂಬೆಯ ಕುಟುಂಬ ಕಂಡು ಬಂದಿದೆ.

ಮರಿಯನ್ನು ಪೋಷಣೆ ಮಾಡುತ್ತಿರುವ ತಾಯಿ ಹಾಗೂ ಆಹಾರ ತಂದು ಕೊಡುತ್ತ ಸಮೀಪದ ಮರದಲ್ಲಿ ಕುಳಿತು ಕಾವಲು ಕಾಯುತ್ತಿರುವ ಗಂಡು ಗೂಬೆ ಕಂಡು ಬಂದಿದೆ.

ಸ್ಥಳೀಯವಾಗಿ ಕೊಂಬಿನ ಗುಮ್ಮ ಎಂದು ಕರೆಯಲಾಗುವ ಈ ಗೂಬೆ ಇಂಡಿಯನ್ ಗ್ರೇಟ್ ಹಾರನ್ಸ್ ಔಲ್ ಅಥವಾ ಇಂಡಿಯನ್ ಈಗಲ್ ಔಲ್ ಎಂದು ಚಿರಪರಿಚಿತ. ವಾಮಾಚಾರದಲ್ಲಿ ಬಳಸಲು ಕೊಂಬಿನ ಗೂಬೆಗಳನ್ನು ಬೇಟೆಯಾಡುವ ಕಾರಣ ಇದರ ಸಂತತಿ ಕ್ಷೀಣಿಸುತ್ತಿದೆ.

ಸಾಮಾನ್ಯವಾಗಿ ಗರುಡನ ಗಾತ್ರದ ಕೊಂಬಿನ ಗೂಬೆ ಬಯಲು ಪ್ರದೇಶದ ಕಲ್ಲು ಬೆಟ್ಟ, ಕುರುಚಲು ಪ್ರದೇಶದ ಕಾಡುಗಳಲ್ಲಿ ಕಾಣಿಸುವ ನಿಶಾಚರಿ. ಪಾದಗಳವರೆಗೂ ಪುಕ್ಕ ಮುಚ್ಚಿಕೊಂಡಿದ್ದು, ಬೂದು ಬಣ್ಣದ ಎದೆಯ ಮೇಲೆ ಕಪ್ಪು ಗೀರುಗಳ ಮಚ್ಚೆ ಇರುತ್ತದೆ.

ರಾತ್ರಿ ಇಲಿ, ಹಾವು, ನಿದ್ರಿಸುತ್ತಿರುವ ಹಕ್ಕಿ, ನೀರಿನ ಬಳಿಯ ಕಪ್ಪೆ, ಮೀನು, ಎಡಿ ಇತ್ಯಾದಿ ಜಲಚರಗಳನ್ನು ಹಿಡಿದು ತಿನ್ನುತ್ತದೆ. ನವೆಂಬರ್ ನಿಂದ ಏಪ್ರಿಲ್ವರೆಗೆ ಗೂಡು ಕಟ್ಟಿ ಮೊಟ್ಟೆ ಇಟ್ಟು, ಮರಿ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.