ಇಂದಿರಾ ಗಾಂಧಿ ಆಡಳಿತ ಮಾದರಿ: ಕಾಂಗ್ರೆಸ್ ಮುಖಂಡ ಎಚ್.ಪಿ. ರಾಜಗೋಪಾಲರೆಡ್ಡಿ

ಆನೇಕಲ್: ಸಮಾಜದ ಎಲ್ಲರಿಗೂ ಸಮಬಾಳು ದೊರೆಯಬೇಕು ಎಂಬ ಉದ್ದೇಶದಿಂದ ಇಂದಿರಾ ಗಾಂಧಿ ಅವರು ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅವರ ನೇರ, ದಿಟ್ಟ ಆಡಳಿತ ಎಲ್ಲರಿಗೂ ಮಾದರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ. ರಾಜಗೋಪಾಲರೆಡ್ಡಿ ತಿಳಿಸಿದರು.
ತಾಲ್ಲೂಕಿನ ಹುಲಿಮಂಗಲದಲ್ಲಿ ಇಂದಿರಾಗಾಂಧಿ ಅವರ 37ನೇ ಪುಣ್ಯತಿಥಿ ಅಂಗವಾಗಿ 39 ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಸಿಮೆಂಟ್ ಶೀಟ್ ವಿತರಿಸಿ ಮಾತನಾಡಿದರು.
ಮುಖಂಡರಾದ ಚಿನ್ನಪ್ಪ, ಫ್ಯಾನ್ಸಿ ರಮೇಶ್, ಶ್ರೀನಿವಾಸ್, ನಂಜುಂಡ ಆರಾಧ್ಯ, ಗೋವಿಂದಮ್ಮ, ಶೋಭಾ, ವೀಣಾ, ಆಶಾ ಮೇರಿ, ಮುನಿರತ್ನ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.