ಜಿಗಣಿ (ಆನೇಕಲ್): ಪಶು ಆಹಾರದ ಮೂಟೆಗಳಲ್ಲಿ ಅಡಗಿಸಿ ಸಾಗಿಸುತ್ತಿದ್ದ ₹1.25 ಕೋಟಿ ಮೌಲ್ಯದ 250 ಕೆ.ಜಿ ಗಾಂಜಾವನ್ನು ಜಿಗಣಿ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಪ್ಪ ಗೇಟ್ ಬಳಿ ಪ್ರಾರ್ಥನಾ ಬೇಕರಿಯ ಮುಂಭಾಗ ಟ್ರಕ್ ತಡೆದು ಪರಿಶೀಲಿಸಿದಾಗ ಪಶು ಆಹಾರದ ಮೂಟೆಗಳಲ್ಲಿ ಗಾಂಜಾ ಪತ್ತೆಯಾಗಿದೆ.

ಟ್ರಕ್ ಚಾಲಕ ಬಿಹಾರದ ರಾಮಾಯಣ್ ಯಾದವ್ (56) ಮತ್ತು ಸಹಾಯಕ ಚಾಲಕ ಮೊಹಮ್ಮದ್ ಸಬೀರ್ ಖಾನ್(51) ಎಂಬುವರನ್ನು ಬಂಧಿಸಿದ್ದಾರೆ.

ತನಿಖೆ ವೇಳೆ ಅರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಿಂಗ್ಪಿನ್ಗಳಾದ ಬಿಹಾರದ ವಿನೋದ್ ಮತ್ತು ಒಡಿಶಾದ ಬಾಬು ಬಂಧನಕ್ಕೆ ಪೊಲೀಸರು ಬಿಹಾರಕ್ಕೆ ತೆರಳಿದ್ದಾರೆ.

ಛತ್ತೀಸಗಡದಿಂದ ಟ್ರಕ್ನಲ್ಲಿ ತಮಿಳುನಾಡಿನ ನಾಮಕಲ್ಗೆ ಗಾಂಜಾ ಸಾಗಿಸಲಾಗುತ್ತಿತ್ತು.ಟ್ರಕ್ ಬಿಹಾರದ ಮುಹಾಮ್ ಇಂಟರ್ನ್ಯಾಷನಲ್ ಇಂಡೋ ಟ್ರಾನ್ಪೋರ್ಟ್ ಕಂಪನಿಗೆ ಸೇರಿದೆ. ಒಡಿಶಾದ ಜಯಪುರ ಎಂಬಲ್ಲಿ ಮೇವಿನ ನಡುವೆ ಗಾಂಜಾ ಇಡಲಾಗಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಜಿಗಣಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಮತ್ತು ಎಎಸ್ಪಿ ಲಕ್ಷ್ಮೀನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-4-1463236305

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.