ಎಚ್.ಎಂ.ಕೃಷ್ಣಮೂರ್ತಿ ಬಿಜೆಪಿಗೆ ಸೇರ್ಪಡೆ

ಮಾಗಡಿ: ’ದುಡಿಮೆಗೆ ತಕ್ಕ ಗೌರವ ಇಲ್ಲದ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುವುದಾಗಿ‘ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.’ಎರಡೂವರೆ ವರ್ಷದಿಂದ ಜೆಡಿಎಸ್‌ನಲ್ಲಿ ನನಗೆ ಗೌರವ ನೀಡಲಿಲ್ಲ. ಪುರಸಭೆಯಲ್ಲಿ ಜೆಡಿಎಸ್ ಗೆ ಬಹುಮತವಿದ್ದರೂ ಶಾಸಕ ಮಂಜುನಾಥ್, ಬಿಜೆಪಿ ಅಧ್ಯಕ್ಷ ಸ್ಥಾನ ಪಡೆಯಲು ಸಹಕಾರ ನೀಡಿದರು. 2018ರ ಚುನಾವಣೆಯಲ್ಲಿ ಎಚ್.ಸಿ.ಬಾಲಕೃಷ್ಣ ಅವರನ್ನು ಸೋಲಿಸುವಂತೆ ದೇವೇಗೌಡ ಅವರು ಮನವಿ ಮಾಡಿದ್ದರು. ಮಾಗಡಿ ಕ್ಷೇತ್ರವನ್ನು ಕೆಂಪೇಗೌಡರ ಕಾಲದ ಆಡಳಿತ ಮರಳಿ ಪಡೆಯಲು ಡಿ.19ರಂದು ಬಿಜೆಪಿ ಗೆ ಸೇರ್ಪಡೆಯಾಗುತ್ತಿದ್ದೇನೆ’ ಎಂದರು.
ಹಿರಿಯರಾದ ಸಿದ್ದಣ್ಣ ತಾತ, ಕುದೂರು ಬಿಜೆಪಿ ಮುಖಂಡರಾದ ಸತ್ಯನಾರಾಯಣ ಶೆಟ್ಟಿ, ಕೃಷ್ಣಕುಮಾರ್, ಗಂಗಾಧರ್, ಪಾಳ್ಯದಹಳ್ಳಿ ಹನುಮಂತೇಗೌಡ, ಜ್ಯೋತಿಪಾಳ್ಯ ಸೀನಪ್ಪ, ದೊಡ್ಡಿ ಗೋಪಿ, ಕೊಟ್ಟಣ ಬೀದಿ ಜಯಮ್ಮ, ವಕೀಲರಾದ ಜಯಲಕ್ಷ್ಮೀ, ಆನಂದ್, ರಂಗೇಶ್ ಗೌಡ, ಮೋಹನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.