ದೊಡ್ಡಬಳ್ಳಾಪುರ: ದೇಶದ ಪುಷ್ಪ ಕೃಷಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ಕರ್ನಾಟಕ ಫ್ಲವರ್ ಹಬ್ ಆಗಿ ಗುರುತಿಸಿಕೊಂಡಿದೆ. ಆದರೆ ಬಜೆಟ್ನಲ್ಲಿ ಪುಷ್ಪ ಕೃಷಿಗೆ ಸಂಬಂಧಿಸಿದಂತೆ ಒಂದೂ ಸಾಲು ಇಲ್ಲದಿರುವುದು ಹೂ ಬೆಳೆಗಾರರಲ್ಲಿ ಬೇಸರ ಮೂಡಿಸಿದೆ.

ಭಾರತ ವಿದೇಶಿ ಹೂವುಗಳ ಆಮದು ಮಾಡಿಕೊಳ್ಳಲು ವಾರ್ಷಿಕ ₹1 ಸಾವಿರ ಕೋಟಿ ಖರ್ಚು ಮಾಡುತಿತ್ತು. ಈಗ ವಿದೇಶಿ ತಳಿಯ ಹೂವುಗಳನ್ನು ಸ್ಥಳೀಯವಾಗಿ ನಮ್ಮ ರೈತರು ಬೆಳೆಯುತ್ತಿರುವುದರಿಂದ ಈ ಹಣ ಉಳಿತಾಯವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ವಾರ್ಷಿಕ ₹10 ಸಾವಿರ ಕೋಟಿ ವಹಿವಾಟು ನಡೆಸುತ್ತಿರುವ ಪುಷ್ಪ ಕೃಷಿಗೆ ರಾಜ್ಯ ಬಜೆಟ್ನಲ್ಲಿ ಯಾವುದೇ ರೀತಿಯ ಪ್ರೋತ್ಸಾಹ ನೀಡಿದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿ ವಿಮಾನ ನಿಲ್ದಾಣ ಬಿಡುಗಡೆ ಮಾಡಿರುವ ಅಂಕಿ, ಅಂಶದಂತೆ 2026ರ ಜನವರಿ-ಫೆಬ್ರುವರಿಯಲ್ಲಿ 60 ದಶಲಕ್ಷಕ್ಕಿಂತಲೂ ಹೆಚ್ಚು ಗುಲಾಬಿ ಹೂವುಗಳನ್ನು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಫ್ತು ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಶೇ 64 ರಷ್ಟು ಟನ್ ರಫ್ತು ಬೆಳವಣಿಗೆಯಾಗಿದೆ. ವಿಮಾನ ನಿಲ್ದಾಣದಿಂದ 26 ಅಂತರರಾಷ್ಟ್ರೀಯ, 47 ದೇಶೀಯ ಮಾರುಕಟ್ಟೆಗಳಿಗೆ ಸುಮಾರು 60 ದಶಲಕ್ಷ ಗುಲಾಬಿ ಹೂವು ರಫ್ತು ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಸಂಖ್ಯೆಯಲ್ಲಿ ಶೇ 38 ರಷ್ಟು ಮತ್ತು ಒಟ್ಟು ತೂಕದಲ್ಲಿ ಶೇ 64 ರಷ್ಟು ಬೆಳವಣಿಗೆಯಾಗಿದೆ.

ಸಿಂಗಾಪುರ, ಕ್ವಾಲಾಲಂಪುರ, ಅಬುಧಾಬಿ, ನ್ಯೂಯಾರ್ಕ್, ಕುವೈತ್, ಲಾಸ್ ಏಂಜಲೀಸ್ ಹಾಗೂ ಯೂರೋಪ್ ದೇಶಗಳಿಗೆ ಹಾಗೂ ದೆಹಲಿ, ಕೋಲ್ಕತ್ತ, ಗುವಾಹಟಿ, ಮುಂಬೈ, ಜೈಪುರ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ರಾಜ್ಯದ ಹೂವು ರಫ್ತಾಗುತ್ತಿದೆ. ಇಷ್ಟೆಲ್ಲಾ ಮಾರುಕಟ್ಟೆಯನ್ನು ಹೊಂದಿರುವ ಪುಷ್ಪ ಕೃಷಿಗೆ ಬಜೆಟ್ನಲ್ಲಿ ಯಾವುದೇ ರೀತಿಯ ಉತ್ತೇಜನ ಇಲ್ಲದೆ ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಈ ಹಿಂದೆ ಕೃಷಿ ಭಾಗ್ಯ ಯೋಜನೆಯಲ್ಲಿ ಪಾಲಿಹೌಸ್ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತಿತ್ತು. ಆದರೆ ಈಗ ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕಾ ಮಂಡಳಿ ಯೋಜನೆಯಲ್ಲಿ ದೊರೆಯುತ್ತಿರುವ ಸೌಲಭ್ಯ ಹೊರತುಪಡಿಸಿ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಇಲ್ಲ. ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವ ಪೀಳಿಗೆ ಮತ್ತು ಮಹಿಳೆಯರಿಗೆ ನಿರಂತರವಾಗಿ ಪುಷ್ಪ ಕೃಷಿ ಉದ್ಯೋಗ ಸೃಷ್ಟಿಸುತ್ತಿದೆ. ಈ ಕ್ಷೇತ್ರಕ್ಕೆ ಮುಂದಿನ ಬಜೆಟ್ನಲ್ಲಾದರೂ ಆದ್ಯತೆ ಸಿಗುವಂತೆ ಆಗಲಿ ಎಂದು ಭಾರತ ಹೂವು ಬೆಳೆಗಾರರ ಮಂಡಳಿ ಅಧ್ಯಕ್ಷ ಹಾಗೂ ದಕ್ಷಿಣ ಭಾರತ ಪುಷ್ಪ ಕೃಷಿ ಸಂಘ ನಿರ್ದೇಶಕ ಬಿ.ಶ್ರೀಕಾಂತ್ ಆಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.