ಗುರುವಾರ , ಡಿಸೆಂಬರ್ 5, 2019
22 °C

ಸಿದ್ದರಾಮಯ್ಯ ಕಾಲಿನ ದೂಳಿಗೂ ಎಂಟಿಬಿ ನಾಗರಾಜ್ ಸಮವಲ್ಲ: ಬೈರತಿ ಸುರೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಸಿದ್ದರಾಮಯ್ಯ ಕಾಲಿನ ದೂಳಿಗೂ ಎಂಟಿಬಿ ನಾಗರಾಜ್‌ ಸಮವಲ್ಲ ಎಂದು ಹೆಬ್ಬಾಳ ಶಾಸಕ ಬೈರತಿ ಸುರೇಶ್  ಕುಟುಕಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ಎಂಟಿಬಿ ನಾಗರಾಜ್ ಅವರು ಸಿದ್ದರಾಮಯ್ಯ ಅವರ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಶುದ್ಧವಾಗಿದೆ‌. ಮಾಜಿ ಪ್ರಧಾನಿ ದೇವೇಗೌಡರೂ ಹೀಗೆ ಮಾತನಾಡುವುದಿಲ್ಲ. ತಾಲ್ಲೂಕಿನ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರೇ ಕಾರಣ. ಇದುವರೆಗೂ 11 ಬಾರಿ ಕಾಂಗ್ರೆಸ್‌ ಶಾಸಕರು ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಉಪಚುನಾವಣೆ ಬೆಳವಣಿಗೆ ಗಮನಿಸುತ್ತಿದ್ದರೆ 30 ವರ್ಷಗಳ ಹಿಂದಿನ ಚುನಾವಣೆ ನೆನಪಿಗೆ ಬರುತ್ತಿದೆ. ಹಣ ಬಲ, ತೋಳ್ಬಲ ಪ್ರದರ್ಶನವಾಗುತ್ತಿದೆ. ಒಬ್ಬರ ಬಗ್ಗೆ ಇನ್ನೊಬ್ಬರು ಅರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ರಾಜಕೀಯ ಪಕ್ಷಗಳು ಮಾಡಿರುವ ಸಾಧನೆ ಮುಂದಿಟ್ಟುಕೊಂಡು ಮತ ಕೇಳಬೇಕು. ಅದನ್ನು ಬಿಟ್ಟು ಕ್ಷುಲ್ಲಕವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಅವರಿಂದ ತಾಲ್ಲೂಕಿನ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ದೇಶವನ್ನು 15ವರ್ಷ ಆಳಿದ ಇಂದಿರಾ ಗಾಂಧಿ ಮಹಿಳೆ ಅಲ್ಲವೇ? ಸಾಕಷ್ಟು ಮಹಿಳೆಯರು ವಿವಿಧ ಹುದ್ದೆ ಅಲಂಕರಿಸಿ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲವೇ’ ಎಂದು ಅವರು ಪ್ರಶ್ನಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು