ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಪರ ಕಾಳಜಿ ಹೊಂದಿದ್ದ ಕೆಂಪೇಗೌಡ

Last Updated 28 ಜೂನ್ 2019, 13:46 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೆಂಪೇಗೌಡರಿಗೆ ಸಕಲ ಜೀವರಾಶಿಗಳ ಮೇಲೆ ಕಾಳಜಿ ಇತ್ತು ಎಂದುಮೆಳೆಕೋಟೆ ಕ್ರಾಸಿನ ಎಸ್.ಜೆ.ಸಿ.ಆರ್.ವಿದ್ಯಾನಿಕೇತನ ಶಾಲೆಯಮುಖ್ಯ ಶಿಕ್ಷಕ ಎಚ್‌.ಎಲ್‌.ವಿಜಯಕುಮಾರ್ ಹೇಳಿದರು.

ಇಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಂಪೇಗೌಡರು ತಮ್ಮ ಆಡಳಿತದ ಅವಧಿಯಲ್ಲಿ ಮಾಡಿಸಿರುವ ಸಮಾಜಮುಖಿ ಕೆಲಸಗಳು ಮನುಷ್ಯರನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಮಾಡಲಿಲ್ಲ. ಸಕಲ ಪ್ರಾಣಿ ಪಕ್ಷಿಗಳು ಈ ಭೂಮಿಯ ಮೇಲೆ ಬದಕಲು ಸಮಾನ ಹಕ್ಕು ಹೊಂದಿವೆ ಎನ್ನುವ ದೃಷ್ಟಿಯಿಂದ ಕೆರೆ,ಕುಂಟೆಗಳನ್ನು ಕಟ್ಟಿಸಿದರು.

‘ಕೆಂಪೇಗೌಡರಿಗೆ ಅಂದಿನ ಕಾಲಕ್ಕೆ ಇದ್ದ ಪರಿಸರ ಪ್ರೀತಿಯಿಂದಾಗಿಯೇ ಇಂದಿಗೂ ನಾವು ಗ್ರಾಮಗಳ ಹೊರಗೆ ಗುಂಡುತೋಪುಗಳನ್ನು ಕಾಣುತ್ತಿದ್ದೇವೆ. ಕೆಂಪೇಗೌಡರಂತಹ ಜನ ಸ್ನೇಹಿತ ಮಹಾನ್‌ ಪುರುಷರ ಆಡಳಿತದ ಅವಧಿಯಲ್ಲಿನ ಸೇವೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ನಿರಂತರವಾಗಿ ನಡೆಯಬೇಕು’ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ನರಸಿಂಹಮೂರ್ತಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT