ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ 18ನೇ ವರ್ಷಾಚರಣೆ ಅಂಗವಾಗಿ ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆ ಹಾಗೂ ಸ್ಮರಣಾರ್ಥ ಅಂಚೆ ಕಾರ್ಡ್ಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.

2008ರಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಆರಂಭವಾದ ದೇಶದ ಮೊದಲ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವಾದ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ನಗರವನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಈ ವಿಶೇಷ ಗೌರವ ನೀಡಲಾಗಿದೆ.

ವಿಮಾನ ನಿಲ್ದಾಣದ ಅಂಚೆ ಕಚೇರಿಯಲ್ಲಿ ಬಳಸಲಾಗುವ ಶಾಶ್ವತ ಚಿತ್ರಾತ್ಮಕ ರದ್ದತಿ ಮೊಹರಿನಲ್ಲಿ ನಾಡಪ್ರಭು ಕೆಂಪೇಗೌಡರ ಚಿತ್ರಣದೊಂದಿಗೆ ವಿಮಾನ ನಿಲ್ದಾಣದ ವಿನ್ಯಾಸ ಅಳವಡಿಸಲಾಗಿದೆ. ಇದು ನಗರದ ಐತಿಹಾಸಿಕ ಪರಂಪರೆ ಮತ್ತು ಆಧುನಿಕ ಜಾಗತಿಕ ಗುರುತಿನ ಸಂಕೇತವಾಗಿ ಮೂಡಿ ಬಂದಿದೆ.

ವಿಶೇಷ ಅಂಚೆ ಲಕೋಟೆ ಹಾಗೂ ಸ್ಮರಣಾರ್ಥ ಅಂಚೆ ಕಾರ್ಡ್ಗಳು ಪ್ರಯಾಣಿಕರು ಮತ್ತು ಅಂಚೆ ಚೀಟಿ ಸಂಗ್ರಹಾಸಕ್ತರಿಗೆ ವಿಶೇಷ ಸ್ಮರಣಿಕೆಯಾಗಲಿದೆ. ವಿಮಾನ ನಿಲ್ದಾಣದ ‘ಫಿಲ್ಸ್ ಲೈಕ್ ಬಿಎಲ್ಆರ್’ ಅಭಿಯಾನದ ಭಾಗವಾಗಿದೆ.

ಈ ಕುರಿತು ಮಾತನಾಡಿದ ವಿಮಾನ ನಿಲ್ದಾಣದ ಸಿಇಒ ಹರಿ ಮಾರರ್,‘18 ವರ್ಷಗಳ ಪಯಣವು ಬೆಂಗಳೂರಿನ ಬೆಳವಣಿಗೆಯೊಂದಿಗೆ ಬೆಸೆದುಕೊಂಡಿದೆ. ಲಕ್ಷಾಂತರ ಪ್ರಯಾಣಿಕರಿಗೆ ಈ ವಿಮಾನ ನಿಲ್ದಾಣವೇ ನಗರದ ಮೊದಲ ಅನುಭವವಾಗಿದೆ. ಭಾರತೀಯ ಅಂಚೆ ಇಲಾಖೆ ಈ ಗೌರವವು ವಿಮಾನ ನಿಲ್ದಾಣದ ಬೆಳವಣಿಗೆಯನ್ನು ಅರ್ಥಪೂರ್ಣವಾಗಿ ಸ್ಮರಿಸುತ್ತದೆ’ ಎಂದು ಹೇಳಿದರು.

ಭಾರತೀಯ ಅಂಚೆ ಇಲಾಖೆ ಬೆಂಗಳೂರು ಕೇಂದ್ರ ವಲಯದ ಅಂಚೆ ಸೇವೆಗಳ ನಿರ್ದೇಶಕಿ ವಿ.ತಾರಾ ಮಾತನಾಡಿ, ‘ನಗರದ ಪರಂಪರೆ ಮತ್ತು ಜಾಗತಿಕ ಗುರುತಿನ ಪ್ರತೀಕವಾಗಿರುವ ವಿಮಾನ ನಿಲ್ದಾಣವನ್ನು ಗೌರವಿಸುವ ಉದ್ದೇಶದಿಂದ ಈ ಶಾಶ್ವತ ಚಿತ್ರಾತ್ಮಕ ರದ್ದತಿ ಮೊಹರನ್ನು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಾರ್ಡ್ಗಳು ಸಂಗ್ರಹಾಸಕ್ತರಿಗೆ ಅಮೂಲ್ಯ ನೆನಪಾಗಲಿದೆ’ಎಂದು ತಿಳಿಸಿದರು.

ಈ ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ದತಿ ಮೊಹರು ವಿಮಾನ ನಿಲ್ದಾಣದ ಅಂಚೆ ಕಚೇರಿಯಲ್ಲಿ ಲಭ್ಯವಿರಲಿದೆ. ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಕಾರ್ಡ್ಗಳು ಬೆಂಗಳೂರು ಜಿಪಿಒ ಫಿಲಾಟೆಲಿಕ್ ಬ್ಯೂರೋ ಸೇರಿದಂತೆ ರಾಜ್ಯದ ಪ್ರಮುಖ ಫಿಲಾಟೆಲಿಕ್ ಕೇಂದ್ರಗಳಲ್ಲಿ ಸಿಗಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-15-1617483651

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.