ದೇವನಹಳ್ಳಿ: ಬ್ಯಾಂಕಾಕ್ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದ ಪ್ರಯಾಣಿಕರೊಬ್ಬರಿಂದ ₹39.37 ಲಕ್ಷ ಬೆಲೆ ಬಾಳುವ 1.125 ಕೆ.ಜಿ ಹೈಡ್ರೊಫೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬ್ಯಾಂಕಾಕ್ನಿಂದ ಬಂದಿಳಿದ ಪ್ರಯಾಣಿಕರೊಬ್ಬರ ಬ್ಯಾಗ್ ಪರಿಶೀಲನೆ ವೇಳೆ ಎರಡರಿಂದ ಮೂರು ಅಡಿ ಎತ್ತರದ ಫೋಟೊ ಕಂಡು ಬಂತು. ಮನೆಯ ಗೋಡೆಗೆ ನೇತು ಹಾಕಲು ತಂದಿರುವುದಾಗಿ ಪ್ರಯಾಣಿಕ ಹೇಳಿದರೂ ಕಸ್ಟಮ್ಸ್ ಅಧಿಕಾರಿಗಳು ಒಪ್ಪಲಿಲ್ಲ. ಸುತ್ತಿಗೆ ತರಿಸಿ ಫೋಟೊ ಒಡೆಯುವಂತೆ ಸಿಬ್ಬಂದಿಗೆ ಸೂಚಿಸಿದರು.

ಮೀನಿನ ಚಿತ್ರವಿದ್ದ ದೊಡ್ಡ ಫೋಟೊದ ಅಗಲವಾದ ಲೋಹದ ಚೌಕಟ್ಟು ಮತ್ತು ಹಿಂಬದಿಯ ಸೆರಾಮಿಕ್ ಶೀಟ್ ಅನ್ನು ಸುತ್ತಿಗೆಯಿಂದ ಒಡೆದಾಗ ಎರಡು ಪ್ಲಾಸ್ಟಿಕ್ ರ್ಯಾಪರ್ ಕಂಡ ಬಂದವು. ಅಧಿಕಾರಿಗಳ ಸಂದೇಹ ಹುಸಿಯಾಗಲಿಲ್ಲ. ಪ್ಯಾಕೆಟ್ ಬಿಚ್ಚಿದಾಗ ಲಕ್ಷಾಂತರ ರೂಪಾಯಿ ಮೌಲ್ಯದ ಹೈಡ್ರೊಫೋನಿಕ್ ಗಾಂಜಾ ಪತ್ತೆಯಾಯಿತು.

ಆರೋಪಿಯನ್ನು ವಶಕ್ಕೆ ಪಡೆದು ಎನ್ಡಿಪಿಎಸ್ ಕಾಯ್ದೆ–1985ರಡಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.