‘ಖೇಲೆಗಾ ಇಂಡಿಯಾ ಖಿಲೇಗಾ ಇಂಡಿಯಾ’ ಜಾಹೀರಾತಿಗೆ ಚಿತ್ರೀಕರಣ

7

‘ಖೇಲೆಗಾ ಇಂಡಿಯಾ ಖಿಲೇಗಾ ಇಂಡಿಯಾ’ ಜಾಹೀರಾತಿಗೆ ಚಿತ್ರೀಕರಣ

Published:
Updated:
Deccan Herald

ವಿಜಯಪುರ: ‘ಖೇಲೆಗಾ ಇಂಡಿಯಾ ಖಿಲೆಗಾ ಇಂಡಿಯಾ’ ಜಾಹೀರಾತಿಗಾಗಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಶುಕ್ರವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರೀಕರಣ ನಡೆಸಿದರು.

ಇಲ್ಲಿನ ಕ್ರೀಡಾ ಜಾಹೀರಾತಿಗಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುವ ಅವರು, ‘ಖೇಲೆಗಾ ಇಂಡಿಯಾ ಖಿಲೆಗಾ ಇಂಡಿಯಾ’ ಘೋಷ ವಾಕ್ಯದೊಡನೆ ಕಾಲೇಜಿನ ಮೈದಾನದಲ್ಲಿ ಶಾಲಾ ಮಕ್ಕಳಿಂದ ನೂರು ಮೀಟರ್ ಓಟ, ಪಿರಮಿಡ್, ವಾಲಿಬಾಲ್, ಕಬಡ್ಡಿ, ಶಾಟ್‌ಪಟ್, ಟೆನಿಸ್ ಸೇರಿದಂತೆ ಹಲವಾರು ಕ್ರೀಡಾ ಚಟುವಟಿಕೆಗಳನ್ನು ಸೆರೆ ಹಿಡಿದುಕೊಂಡರು.

ಉಪಪ್ರಾಂಶುಪಾಲ ಪಿ.ವೆಂಕಟೇಶ್ ಮಾತನಾಡಿ, ‘ಭಾರತವು ಕೆಲವು ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಇಂದು ನಾವು ಯುವ ಕ್ರೀಡಾ ಪ್ರತಿಭೆಗಳಿಗೆ ಮೂಲ ಸೌಕರ್ಯ ಮತ್ತು ಉನ್ನತ ಮಟ್ಟದ ತರಬೇತಿ ನೀಡಬೇಕು. ಆಗ ಮಾತ್ರ ಭಾರತವು ಕ್ರೀಡೆಯಲ್ಲಿ ಸೂಪರ್ ಪವರ್ ಆಗಲು ಸಾಧ್ಯವಾಗುತ್ತದೆ’ ಎಂದರು.

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ನಿರ್ದೇಶಕ ಓಂ ಶೇಗಾಲ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಕ್ರೀಡೆ ಮತ್ತು ದೈಹಿಕ ಸಮತೋಲನ ಪ್ರಾಮುಖ್ಯವಾಗಿದೆ. ಕ್ರೀಡಾ ತಂಡವು ಆತ್ಮಚೈತನ್ಯವನ್ನು ಹುಟ್ಟು ಹಾಕುತ್ತದೆ. ಕಾರ್ಯತಂತ್ರದ ಮತ್ತು ವಿಶ್ಲೇಷಣಾತ್ಮಕ ಚಿಂತನೆ, ನಾಯಕತ್ವ ಕೌಶಲಗಳಿಂದಾಗಿ ಉತ್ತಮ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

‘ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಹುಲ್ಲುಗಾವಲು ಮಟ್ಟದಲ್ಲಿ ಪುನಶ್ಚೇತನಗೊಳಿಸಲು ‘ಈ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ. ಭಾರತವನ್ನು ಶ್ರೇಷ್ಠ ಕ್ರೀಡಾ ರಾಷ್ಟ್ರವೆಂದು ಸ್ಥಾಪಿಸುವುದು ನಮ್ಮ ಗುರಿಯಾಗಬೇಕು’ ಎಂದರು.

ಛಾಯಾಗ್ರಾಹಕ ಅಮಿತ್ ದೌರಾ, ಉತ್ಪಾದನಾ ನಿಯಂತ್ರಕ ಗೋವಿಂದ್ ಗುಲ್ಯಾನಿ, ಪ್ರವೀಣ್, ಶಿಕ್ಷಕ ಡಾ.ರಮೇಶಪ್ಪ, ಪಿ.ಎಂ.ಕೊಟ್ರೇಶ್, ಬಿ.ಎಸ್.ನಾರಾಯಣ್, ಆನಂದಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !