ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಯಲು ಸೀಮೆಗೆ ಕೃಷ್ಣನದಿ ನೀರು’

ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಪರ ಮತಯಾಚನೆ
Last Updated 14 ಏಪ್ರಿಲ್ 2019, 13:44 IST
ಅಕ್ಷರ ಗಾತ್ರ

ವಿಜಯಪುರ: ‘ಶತ್ರುರಾಷ್ಟ್ರಗಳಿಂದ ದೇಶವನ್ನು ರಕ್ಷಣೆ ಮಾಡಿ ಪ್ರಗತಿಗೆ ಮತ್ತಷ್ಟು ಆದ್ಯತೆ ನೀಡಬೇಕಾದರೆ ರಾಷ್ಟ್ರದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು’ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಚ್ಚಿದಾನಂದಮೂರ್ತಿ ಹೇಳಿದರು.

ಇಲ್ಲಿನ ಮಂಡಿಬೆಲೆ ರಸ್ತೆಯಲ್ಲಿರುವ ಚೌಡೇಶ್ವರಿ ಸರ್ಕಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು.

5 ವರ್ಷದ ಅವಧಿಯಲ್ಲಿ ಆಗಿರುವ ರಾಷ್ಟ್ರದ ಅಭಿವೃದ್ಧಿಗೆ ಬೆರಗಾಗಿರುವ ವಿರೋಧ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿ ಅವರು ಜಾರಿಗೆ ತಂದಿರುವ ಹಲವುಕಾರ್ಯಕ್ರಮಗಳ ಪ್ರಯೋಜನವನ್ನು ಕೋಟ್ಯಂತರ ಮಂದಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಪ್ರಪಂಚದ ಎಲ್ಲ ದೇಶಗಳು ಭಾರತದ ಕಡೆಗೆ ದೃಷ್ಟಿನೆಟ್ಟು ಕಾಯುತ್ತಿವೆ. ಏಷ್ಯಾ ಖಂಡದಲ್ಲಿನ ಬಹುತೇಕ ರಾಷ್ಟ್ರಗಳ ನಾಯಕರು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ ಎಂದರು.

ದೇಶದಲ್ಲಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಗಳು 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ರಾಜ್ಯದಲ್ಲಿ 22ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಹಾಗಾಗಿ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಬೇಕು ಎಂದು ಮನವಿ ಮಾಡಿದರು.

ಮುಖಂಡ ಎಸ್.ಎಲ್.ಎನ್.ಅಶ್ವಥನಾರಾಯಣ ಮಾತನಾಡಿ, ಎರಡು ಬಾರಿ ಮಂತ್ರಿಯಾಗಿ, ಐದು ಬಾರಿ ಶಾಸಕರಾಗಿ ಕೆಲಸ ಮಾಡಿರುವ ಬಿ.ಎನ್.ಬಚ್ಚೇಗೌಡ ಅವರಿಗೆ ಸ್ಥಳೀಯರು, ಇಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವು ಇದೆ ಎಂದರು.

ಅವರು ಈ ಭಾಗದಿಂದ ಆಯ್ಕೆಯಾದರೆ ಕೃಷ್ಣಾನದಿ ನೀರನ್ನು ಬಯಲುಸೀಮೆ ಭಾಗಗಳಿಗೆ ತರುವಂತಹ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. 10 ವರ್ಷಗಳ ಅವಧಿಯಲ್ಲಿ ಸಂಸದ ವೀರಪ್ಪ ಮೊಯಿಲಿ ಅವರು ಕ್ಷೇತ್ರವನ್ನು ಅಭಿವೃದ್ಧಿ ಶೂನ್ಯ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದರು.

ಹೇಗೆ ನಂಬಬೇಕು: ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಗೌಡ ಮಾತನಾಡಿ, 10 ವರ್ಷಗಳಲ್ಲಿ ಈ ಭಾಗದ ಜನತೆಗೆ ಮೂಲಸೌಕರ್ಯಗಳ ಜ‌ತೆಗೆ, ಕುಡಿಯುವ ನೀರು ಕೊಡಲು ಸಾಧ್ಯವಿಲ್ಲದವರು ಮುಂದಿನ ದಿನಗಳಲ್ಲಿ ನೀರು ತರುತ್ತಾರೆ ಎಂದು ಹೇಳಿದರೆ ಹೇಗೆ ನಂಬಬೇಕು. ಜನರು ಪದೇ ಪದೇ ಸುಳ್ಳನ್ನು ನಂಬುತ್ತಾರೆಯೇ ? ಆದ್ದರಿಂದ ರೈತರ ಪರವಾಗಿರುವ ಅಭ್ಯರ್ಥಿಗೆ ಮತ ನೀಡಿ ಎಂದರು.

ಜಿಲ್ಲಾ ಘಟಕದ ರೈತ ಮೋರ್ಚಾ ಅಧ್ಯಕ್ಷ ಎನ್. ರಾಜಗೋಪಾಲ್, ಪುರಸಭಾ ಸದಸ್ಯ ಬಲಮುರಿ ಶ್ರೀನಿವಾಸ್, ತಾಲ್ಲೂಕು ಮುಖಂಡ ಕನಕರಾಜು, ನಗರ ಘಟಕದ ಅಧ್ಯಕ್ಷ ಚ. ವಿಜಯಬಾಬು, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಡಿ.ಎಂ. ಮುನೀಂದ್ರ, ನರಸಿಂಹ, ಮಹಿಳಾ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷೆ ಬೂದಿಗೆರೆ ನಾಗವೇಣಿ, ಉಸ್ತುವಾರಿ ತಂಗರಾಜ್, ವಿಮಲಮ್ಮ, ಗುಂಡಮ್ಮ, ಸಾವಿತ್ರಮ್ಮ, ಲಕ್ಷ್ಮಮ್ಮ, ದ್ರಾಕ್ಷಾಯಿಣಿ, ನಾಜೀಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT