ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಮುಷ್ಕರ: ಜನರ ಪರದಾಟ

ಪೊಲೀಸ್‌ ಬಂದೋಬಸ್ತ್‌ನಲ್ಲಿ ತೆರಳುತ್ತಿದ್ದ ಬಸ್‌ಗೆ ಕಲ್ಲು ತೂರಿದ ಕಿಡಿಗೇಡಿಗಳು
Last Updated 8 ಏಪ್ರಿಲ್ 2021, 2:39 IST
ಅಕ್ಷರ ಗಾತ್ರ

ಆನೇಕಲ್:ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆಯ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಹಾಗಾಗಿ ಸಾರ್ವಜನಿಕರು ಪರದಾಡುವಂತಾಯಿತು.

ಆನೇಕಲ್‌ ಡಿಪೊದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಹೊರಬರಲಿಲ್ಲ. ಜಿಗಣಿ, ಚಂದಾಪುರ, ಸೂರ್ಯನಗರ, ಎಲೆಕ್ಟ್ರಾನಿಕ್ ‌ಸಿಟಿಯ ಬಿಎಂಟಿಸಿ ಬಸ್‌ಗಳು ಡಿಪೊದಿಂದ ಹೊರಬರಲಿಲ್ಲ. ಸದಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಂದ ತುಂಬಿರುತ್ತಿದ್ದ ಬಸ್‌ನಿಲ್ದಾಣವು ಬಿಕೋ ಎನ್ನುತ್ತಿತ್ತು. ಆದರೆ ಈ ಜಾಗವನ್ನು ಖಾಸಗಿ ಬಸ್‌ಗಳು ಆಕ್ರಮಿಸಿದ್ದವು.

ಖಾಸಗಿ ಬಸ್‌ಗಳನ್ನು ಸಾರ್ವಜನಿಕರು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಟೆಂಪೊಗಳು, ಮಿನಿ ಬಸ್‌ಗಳ ಓಡಾಟ ಹೆಚ್ಚಾಗಿತ್ತು. ಹೆಬ್ಬಗೋಡಿ, ವೀರಸಂದ್ರ, ಎಲೆಕ್ಟ್ರಾನಿಕ್ ‌ಸಿಟಿ, ಅತ್ತಿಬೆಲೆ ಸೇರಿದಂತೆ ಕೈಗಾರಿಕಾ ಪ್ರದೇಶಗಳಿಗೆ ತೆರಳಬೇಕಾದ ಕಾರ್ಮಿಕರು ಪರದಾಡಿದರು.

ಜಿಗಣಿಯಲ್ಲಿ ಆಟೊ ಚಾಲಕರು ಮತ್ತು ಕ್ಯಾಬ್‌ ಚಾಲಕರು ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯುತ್ತಿದ್ದನ್ನು ಗಮನಿಸಿದ ಜಿಗಣಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಬಿ.ಕೆ. ಶೇಖರ್‌ ಎಚ್ಚರಿಕೆ ನೀಡಿ ಯಾವುದೇ ಕಾರಣಕ್ಕೂ ಹೆಚ್ಚು ಹಣ ಪಡೆಯಬಾರದು ಎಂದು ತಾಕೀತು ಮಾಡಿದರು. ಅತ್ತಿಬೆಲೆಯಿಂದ ತಮಿಳುನಾಡಿನ ಹೊಸೂರಿಗೆ ಬಸ್‌ಗಳು ವಿರಳವಾಗಿ ಸಂಚರಿಸಿದವು. ಪೊಲೀಸ್‌ ಬಂದೋಬಸ್ತ್‌ನಲ್ಲಿ ಕೆಲವು ವಾಹನಗಳು ಹೊಸೂರಿಗೆ ಕಳುಹಿಸಲಾಗುತ್ತಿತ್ತು.ದ್ವಿಚಕ್ರವಾಹನದಲ್ಲಿ ಬಂದ ಕಿಡಿಗೇಡಿ ಗಳು ಬಸ್‌ಗೆ ಕಲ್ಲು ತೂರಿದ ಘಟನೆನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT