ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ನಾಯಿ ಭಕ್ಷಕ ಚಿರತೆ ಸೆರೆ

Last Updated 3 ಜೂನ್ 2022, 4:35 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತೋಟದ ಮನೆಯಲ್ಲಿ ಸಾಕಿಕೊಂಡಿದ್ದ ನಾಯಿಯನ್ನು ಕೊಂದು ಭಕ್ಷಿಸುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.

ತಾಲ್ಲೂಕಿನ ಕೋಳೂರು ಸಮೀಪ ಅರಣ್ಯ ಇಲಾಖೆ ಬೆಳೆಸಿರುವ ಕಿರುಅರಣ್ಯದಲ್ಲಿ ಕಂಡು ಬರುತ್ತಿದ್ದ ಚಿರತೆ ನಾಲ್ಕು ದಿನಗಳ ಹಿಂದೆ ಹರೀಶ್ ಎಂಬುವವರ ತೋಟದ ಮನೆಗೆ ನುಗ್ಗಿ ನಾಯಿಯನ್ನು ಭಕ್ಷಿಸಿತ್ತು. ಶ್ರೀನಿವಾಸಪುರ, ಮರಳೇನಹಳ್ಳಿ, ಕಮಲೂರು, ಶಿರವಾರ, ಅಂತರಹಳ್ಳಿ, ಕೋಳೂರು ಗ್ರಾಮಗಳ ಸುಮಾರು ಮೂರು ಕಿ.ಮೀ.ವ್ಯಾಪ್ತಿಯ ಗ್ರಾಮಗಳ ಜನರು ಚಿರತೆಯಿಂದಾಗಿ ಆತಂಕದಲ್ಲಿ ದಿನ ಕಳೆಯುವಂತಾಗಿತ್ತು.

ಚಿರತೆ ಹಾವಳಿ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ತ್ವರಿತವಾಗಿ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT