ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರನ್ನು ವಿಚಾರವಂತರನ್ನಾಗಿ ಮಾಡಿ

ಯುಗಾದಿ ಕವಿಗೋಷ್ಠಿ ಮತ್ತು ಗೀತಗಾಯನ ಕಾರ್ಯಕ್ರಮ
Last Updated 7 ಏಪ್ರಿಲ್ 2019, 13:49 IST
ಅಕ್ಷರ ಗಾತ್ರ

ವಿಜಯಪುರ: ‘ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಜನರನ್ನು ಸರಿದಾರಿಗೆ ತರುವಂತಹ ಕಾರ್ಯವಾಗಬೇಕಾಗಿದೆ’ ಎಂದು ಪರಿವರ್ತನಾ ಕಲಾ ಸಂಸ್ಥೆಯ ಗೌರವ ಅಧ್ಯಕ್ಷ ಬಾವಾಪುರ ನಂಜುಂಡಪ್ಪ ಹೇಳಿದರು.

ಚನ್ನರಾಯಪಟ್ಟಣ ಹೋಬಳಿಯ ಟಿ.ಅಗ್ರಹಾರ ಗ್ರಾಮದಲ್ಲಿ ಪರಿವರ್ತನಾ ಕಲಾಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಯುಗಾದಿ ಕವಿಗೋಷ್ಠಿ ಮತ್ತು ಗೀತಗಾಯನ ಕಾರ್ಯಕಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಲೆ, ಸಾಹಿತ್ಯ, ಸಂಸ್ಕೃತಿ, ನೆಲ, ಜಲ, ಭಾಷೆ, ನಾಡು, ನುಡಿಯ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಸಾಹಿತ್ಯದ ಅಭಿರುಚಿಯನ್ನು ಅವರಲ್ಲಿ ಬೆಳೆಸಬೇಕಾಗಿದೆ. ಅವರನ್ನು ವಿಚಾರವಂತರನ್ನಾಗಿ ಮಾಡುವತ್ತ ಚಿಂತಿಸಬೇಕಿದೆ’ ಎಂದರು.

ಪರಿವರ್ತನಾ ಕಲಾಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಡಾ.ದೇವರಾಜ್ ಮಾತನಾಡಿ ‘ಗ್ರಾಮೀಣ ಪ್ರತಿಭೆಗಳಿಗೆ ಎಲ್ಲಾ ರೀತಿಯ ಅವಕಾಶಗಳನ್ನು ಮುಕ್ತವಾಗಿ ಒದಗಿಸಿದಾಗ ಮಾತ್ರ ಸ್ಪರ್ಧಾ ಜಗತ್ತಿನಲ್ಲಿ ಅವರು ಸಾಧನೆ ಮಾಡಲು ಅನುವಾಗುತ್ತದೆ. ಅಭಿನಯ, ನಿರ್ದೇಶನ ಮುಂತಾದ ಕ್ರಿಯಾತ್ಮಕ ಕಲೆಗಳತ್ತ ಅವರನ್ನು ಪ್ರೋತ್ಸಾಹಿಸಬೇಕಿದೆ’ ಎಂದು ತಿಳಿಸಿದರು.

‘ಕಥೆ, ಕವನ, ಪ್ರಸಾದನ, ಛಾಯಾಗ್ರಹಣ, ನಾಟಕ ರಚನೆಯಂತಹ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು ಈಗಾಗಲೇ ತರಬೇತಿ ಹೊಂದಿದ ಯುವಜನರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರ’ ಎಂದರು.

ಕವಿಗೋಷ್ಠಿಯಲ್ಲಿ ಟಿ.ಅಗ್ರಹಾರದ ಅಭಿರಾಮ್ ಅವರು ‘ಕನಸು’, ಬೂದಿಗೆರೆ ಭರತ್.ಎಂ ಅವರು ‘ಸರ್ಟಿಫಿಕೇಟ್’, ವಿದ್ಯಾನಗರಕ್ರಾಸ್ ಭರತ್ ಕುಮಾರ್ ಅವರು ‘ಜಾತಿಯ ಥಳಕು’, ವಿದ್ಯಾರಣ್ಯಪುರ ಕೆ.ವಿ.ಲೋಕೇಶ್ ಅವರು ‘ಜಾಗೋ ಭಾರತ್’, ‘ಜಯಹೋ ಭಾರತ್’, ಪುನೀತ್ ಅವರು ‘ಪ್ರೀತಿಪಾಶ’, ಹುರಳಗುರ್ಕಿ ಗೌತಮ್ ಅವರು ‘ನಮ್ಮ ಸೈನಿಕ ನಮ್ಮ ಹೆಮ್ಮೆ’, ಡಾ.ದೇವನಹಳ್ಳಿ ದೇವರಾಜ್ ಅವರು ‘ಮತವೊಂದು ಮನೆ ಮಗಳು’ ಎಂಬ ಕವನಗಳನ್ನು ವಾಚಿಸಿದರು.

ಸಂಸ್ಥೆಯ ಕಲಾವಿದರಿಂದ ಯುಗಾದಿ-ಗೀತಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಗ್ರಾಮಸ್ಥರಾದ ಕೆ.ಮುನೇಗೌಡ, ಕಲಾವಿದ ನಾರಾಯಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT