ಮಲ್ಲಿಮಾಕನಪುರ (ಹೊಸಕೋಟೆ): ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅಗತ್ಯವಾದ ಎಲ್ಲ ರೀತಿಯ ಸಹಕಾರವನ್ನು ಪುರುಷರಿಗೆ ನೀಡಬೇಕಿದೆ. ಅದರಂತೆ ತಾಲ್ಲೂಕಿನ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಹಿಳಾ ಕ್ರೀಡಾಕೂಟ ಆಯೋಜಿಸಿ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ ಎಂದು ಸಮಸ್ತ ಫೌಂಡೇಷನ್ ಸಂಚಾಲಕಿ ಹಾಗೂ ಶಾಸಕ ಶರತ್ ಪತ್ನಿ ಪ್ರತಿಭಾ ಶರತ್ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿ ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಿಮಾಕನಪುರದಲ್ಲಿ ಮಹಿಳಾ ಕ್ರೀಡಾಕೂಟ ಹಾಗೂ ಮಕ್ಕಳ ಆಟೋಟ ಪರಿಕರ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಹೆಣ್ಣು ಹೆಣ್ಣನ್ನು ದೂಷಿಸುವ ಬದಲು ಪರಸ್ಪರ ಗೌರವಿಸಿದಾಗ ಮಾತ್ರ ಹೆಣ್ಣು ಮತ್ತಷ್ಟು ಅಭಿವೃದ್ದಿ ಪಥದತ್ತ ಸಾಗಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆ ತನ್ನ ಕುಟುಂಬದ ಅಭಿವೃದ್ಧಿ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲೂ ಅವಿರತ ಶ್ರಮಿಸುತ್ತಾ ಹಲವು ಟೀಕೆಗಳ ನಡುವೆಯೂ ಯಶಸ್ವಿ ಜೀವನ ನಡೆಸುತ್ತಿರುವುದು ಪ್ರಶಂಸನೀಯ ಸಂಗತಿ ಎಂದರು.

ಪಿಡಿಒ ರವಿಚಂದ್ರ, ಗ್ರಾ.ಪಂ ಆಡಳಿತಾಧಿಕಾರಿ ಸುಬ್ರಮಣಿ, ಮುಖಂಡರಾದ ವಿಜಯ್ ಕುಮಾರ್, ಬಚ್ಚೇಗೌಡ, ಮಿಥುನ್, ಉದಯ್ಕುಮಾರ್, ವರುಣ್, ಮುಖ್ಯ ಶಿಕ್ಷಕಿ ಹಂಸ, ಸಹ ಶಿಕ್ಷಕಿಯರಾದ ಗಾಯತ್ರಿ, ಅರುಣ, ವಾಣಿಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.