ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿಹೋದ ಮ್ಯಾನ್‌ಹೋಲ್‌ಗಳಿಂದ ಜೀವನ ಕಷ್ಟಕರ

Last Updated 4 ನವೆಂಬರ್ 2019, 15:04 IST
ಅಕ್ಷರ ಗಾತ್ರ

ವಿಜಯಪುರ: ಮ್ಯಾನ್ ಹೋಲ್ ತುಂಬಿಹೋಗಿದೆ. ಕೊಳಚೆ ನೀರೆಲ್ಲವೂ ಮನೆಗಳಲ್ಲಿನ ಚೇಂಬರ್ ಗಳ ಮೂಲಕ ಒಳಗೆ ಬರುತ್ತಿವೆ. ಮನೆಗಳಲ್ಲಿ ದುರ್ವಾಸನೆ ಬೀರುತ್ತಿದೆ. ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ನರಸಿಂಹ ನಾಯಕ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ 1 ನೇ ವಾರ್ಡಿನ ಅಶೋಕನಗರದಲ್ಲಿ ಒಳಚರಂಡಿ ಸಮರ್ಪಕವಾಗಿಲ್ಲ. ಒಳಚರಂಡಿಯ ಚೇಂಬರ್ ಕಿತ್ತುಹೋಗಿ 9 ತಿಂಗಳಾಗಿದೆ. ಇದುವರೆಗೂ ಸರಿಪಡಿಸಿಲ್ಲ. ಪುರಸಭೆಗೆ ಹೋಗಿ ಸಮಸ್ಯೆ ಹೇಳಿಕೊಳ್ಳೋಣವೆಂದರೆ ಅಧಿಕಾರಿಗಳೇ ಇರಲ್ಲ. ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನು ಕಂಡರೆ ತುಂಬಾ ಬೇಸರವಾಗುತ್ತದೆ ಎಂದರು.

ಮನೆಗಳ ಪಕ್ಕದಲ್ಲಿರುವ ಖಾಲಿ ನಿವೇಶಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳಿಂದಾಗಿ ಸಂಜೆಯಾದರೆ ವಿಪರೀತ ಸೊಳ್ಳೆಗಳೊಂದಿಗೆ ರಾತ್ರಿಯ ವೇಳೆ ಮ್ಯಾನ್ ಹೋಲ್ ನಿಂದ ಬರುವ ದುರ್ವಾಸನೆಯಿಂದಾಗಿ ಮನೆಗಳಲ್ಲಿ ವಾಸಮಾಡುವುದೇ ಕಷ್ಟವಾಗಿ ಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಖಾಲಿ ನಿವೇಶನಗಳನ್ನು ಇಟ್ಟುಕೊಂಡು ಸರಿಯಾಗಿ ನಿರ್ವಹಣೆ ಮಾಡದೆ ಇರುವವರಿಗೆ ನೊಟೀಸ್ ಕೊಟ್ಟು ಸ್ವಚ್ಚವಾಗಿ ಇಟ್ಟುಕೊಳ್ಳುವಂತೆ ಸೂಚನೆ ಕೊಡಿ ಎಂದರೂ ಅದನ್ನು ಮಾಡಲಿಲ್ಲ. ತಕ್ಷಣಕ್ಕೆ ಯಂತ್ರದ ಸಹಾಯದಿಂದ ಮ್ಯಾನ್ ಹೋಲ್ ನಲ್ಲಿ ತುಂಬಿಕೊಂಡಿರುವ ಕೊಳಚೆ ನೀರನ್ನು ಹೊರತೆಗೆದು, ನಂತರ ಎಲ್ಲಿ ಬ್ಲಾಕ್ ಆಗಿದೆಯೋ ಅದನ್ನು ಸರಿಪಡಿಸಿ. ಮ್ಯಾನ್ ಹೋಲ್ ಮೇಲೆ ಮುಚ್ಚಳ ಅಳವಡಿಸಿಕೊಡಿ ಎಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಒಮ್ಮೆ ಆರೋಗ್ಯ ನಿರೀಕ್ಷಕಿ ಬಂದು ನೋಡಿಕೊಂಡು ಹೋಗಿದ್ದು ಬಿಟ್ಟರೆ ಏನೂ ಪ್ರಗತಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ಅಶೋಕ್ ಮಾತನಾಡಿ, ಸಮೀಪದಲ್ಲಿ ರಾತ್ರಿಯ ವೇಳೆ ಕೆಲವು ಯುವಕರು ಬಂದು ಕುಡಿದು ಬಾಟಲಿಗಳನ್ನು ಹೊಡೆದು ಹಾಕುತ್ತಿದ್ದಾರೆ. ಸಮೀಪದಲ್ಲಿರುವ ರೇಷ್ಮೆ ಇಲಾಖೆಗೆ ಸಂಬಂಧಿಸಿದ ಕಟ್ಟಡದ ಬಳಿಯಲ್ಲಿ ದಿನನಿತ್ಯ ಮಾದಕ ವಸ್ತುಗಳು ಸೇದುತ್ತಾರೆ. ಮೊಬೈಲ್ ಗಳಲ್ಲಿ ಸಿನಿಮಾಗಳು ನೋಡಿಕೊಂಡು ಕುಳಿತುಕೊಳ್ಳುತ್ತಾರೆ. ಅವರಿಗೆ ಬುದ್ದಿವಾದ ಹೇಳಲಿಕ್ಕೆ ಹೋದರೂ ಆವ್ಯಾಚವಾಗಿ ಮಾತನಾಡುತ್ತಾರೆ. ಈ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಎಂದರು.

‘ವಾರ್ಡ್‌ನ ಈ ಭಾಗವನ್ನು ಪುರಸಭಾ ಅಧಿಕಾರಿಗಳು ತುಂಬಾ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮಾವು ಯಾವುದೇ ದೂರುಗಳನ್ನು ಕೊಟ್ಟು ಬಂದರೂ ಅಧಿಕಾರಿಗಳು ಗಮನ ಹರಿಸುವುದಿಲ್ಲ. ನಾವೇ ಪದೇ ಪದೇ ಪುರಸಭೆಗೆ ಅಲೆದಾಡಬೇಕು. ಕಚೇರಿಗೆ ಹೋದರೂ ಉತ್ತರಿಸುವವರು ಇರಲ್ಲ. ಇತ್ತೀಚೆಗೆ ಯಾವ ಕೆಲಸಗಳೂ ಆಗುತ್ತಿಲ್ಲ’ ಎಂದು ದೂರಿದರು.

ಸ್ಥಳೀಯರಾದ ನಾಗರತ್ನಮ್ಮ. ತಿರುಮಳಮ್ಮ,ಮಹದೇವಮ್ಮ, ರತ್ನಮ್ಮ, ರಮೇಶ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT