ಉದ್ಯಮಶೀಲರಾಗಲು ಹಲವು ಅವಕಾಶ

7
ಮಹಿಳಾ ಉದ್ಯಮಶೀಲತೆ ತರಬೇತಿ ಕಾರ್ಯಾಗಾರ

ಉದ್ಯಮಶೀಲರಾಗಲು ಹಲವು ಅವಕಾಶ

Published:
Updated:
Prajavani

 ಪ್ರಗತಿಯತ್ತ ಸಾಗುತ್ತಿರುವ ದೇಶದಲ್ಲಿ ಉದ್ಯಮಶೀಲರಾಗಲು ಮಹಿಳೆಯರಿಗೆ ಅನೇಕ ಅವಕಾಶಗಳಿವೆ ಎಂದು ದಿಶಾ ಐಇಸಿ ಔಟ್‌ರೀಚ್ ತರಬೇತಿ ಕೇಂದ್ರ ಜಿಲ್ಲಾ ವ್ಯವಸ್ಥಾಪಕಿ ರತ್ನ ಹೇಳಿದರು.

ಇಲ್ಲಿನ ಸಿದ್ಧಾರ್ಥ ಸೇವಾ ಸಂಸ್ಥೆ ಮಹಿಳಾ ತರಬೇತಿ ಕೇಂದ್ರದಲ್ಲಿ ನಡೆದ ‘ಉದ್ಯಮಶೀಲತೆ ತರಬೇತಿ ಕಾರ್ಯಾಗಾರ’ದಲ್ಲಿ ಮಾತನಾಡಿದರು.

ಪ್ರಸ್ತುತ 152 ದೇಶದಲ್ಲಿ ಮಹಿಳೆಯರನ್ನು ಉದ್ಯಮಶೀಲರನ್ನಾಗಿ ಮುಂಚೂಣಿಗೆ ತರಲು ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಸಂಸ್ಥೆ ನೇರವಾಗಿ ಸರ್ಕಾರಗಳಿಗೆ ಅನುದಾನ ನೀಡುತ್ತಿದೆ. ಇದರೊಂದಿಗೆ ತರಬೇತಿಯೂ ನೀಡಲಾಗುತ್ತಿದೆ ಎಂದು ಹೇಳಿದರು.

ತರಬೇತಿ ಪಡೆದು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ಗ್ರಾಮಾಂತರ ಜಿಲ್ಲೆಗೆ ವಾರ್ಷಿಕ ₹50 ಕೋಟಿ ನೀಡಲಿದೆ. ಇದರ ಪ್ರಯೋಜನೆ ಪಡೆದು ಉದ್ಯಮ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಜಿಕೆವಿಕೆ ಕೌಶಲ ಅಭಿವೃದ್ಧಿ ಸಂಪನ್ಮೂಲ ವ್ಯಕ್ತಿ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಕೌಶಲ ಅಭಿವೃದ್ಧಿ ಶೇ3ರಷ್ಟು ಮಾತ್ರ ಇದೆ. ವಿಶ್ವದಲ್ಲಿ ಜಪಾನ್‌ ಅತಿಹೆಚ್ಚು ಕೌಶಲ ಅಭಿವೃದ್ಧಿ ಹೊಂದಿದೆ. ಎಲ್ಲಿ ಮಹಿಳೆಯರ ಆದಾಯ ಹೆಚ್ಚಿರುತ್ತದೆಯೋ ಅಲ್ಲಿ ಉತ್ತಮ ಆರ್ಥಿಕ ಪ್ರಗತಿ ಸಾಧ್ಯವಿದೆ. ಮಹಿಳೆಯರು ಉದ್ಯಮದಲ್ಲಿ ತೊಡಗಿಸಿಕೊಂಡರೆ ದೇಶ ಸಬಲವಾಗಲಿದೆ ಎಂದು ಹೇಳಿದರು.

ಸಿದ್ಧಾರ್ಥ ಸೇವಾ ಸಂಸ್ಥೆ ಅಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ ಮಾತನಾಡಿ, ಸಿದ್ಧಾರ್ಥ ಸೇವಾ ಸಂಸ್ಥೆ ಕಳೆದ 12 ವರ್ಷಗಳಿಂದ ಹೊಲಿಗೆ ಮತ್ತು ಕೈಮಗ್ಗದಲ್ಲಿ ತರಬೇತಿ ಕಾರ್ಯಾಗಾರ ನಡೆಸುತ್ತಿದೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸಲು ಶ್ರಮಿಸುತ್ತಿದೆ. ಪ್ರಸ್ತುತ ವಿದ್ಯುತ್ ಮಗ್ಗದಲ್ಲಿಯೂ ತರಬೇತಿ ನೀಡುತ್ತಿದೆ. 2,200 ಮಹಿಳೆಯರಿಗೆ ಬ್ಯಾಂಕಿನ ಮೂಲಕ ಸಾಲ ಕೊಡಿಸಿ ಸಣ್ಣ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ನೆರವು ನೀಡಲಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿದರು. ಮಾನವ ಹಕ್ಕುಗಳ ಜಾಗೃತಿ ಸಮಿತಿ ತಾಲ್ಲೂಕು ಘಟಕ ಅಧ್ಯಕ್ಷ ಎ.ನಾರಾಯಣಸ್ವಾಮಿ, ಮುಖಂಡ ಸುಬ್ಬೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !