ಗಣಿತ ಕಲಿಕೆ ಭಯ ಬೇಡ  

6

ಗಣಿತ ಕಲಿಕೆ ಭಯ ಬೇಡ  

Published:
Updated:
Deccan Herald

ದೊಡ್ಡಬಳ್ಳಾಪುರ: ಮಕ್ಕಳಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸಲು ಅಕ್ಷರ ಫೌಂಡೇಷನ್‌ ನೀಡುತ್ತಿರುವ ತರಬೇತಿ ಮತ್ತು ಸ್ಪರ್ಧೆಗಳು ಹೆಚ್ಚು ಉಪಯೋಗವಾಗಲಿದೆ ಎಂದು ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಂಗಧಾಮಯ್ಯ ಹೇಳಿದರು.

ತಾಲ್ಲೂಕಿನ ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಭಿನಂದನಾ ಪತ್ರ ವಿತರಣೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌, ಗಣಿತ ಕಷ್ಟ ಎನ್ನುವ ಭಾವನೆ ಬೆಳೆದಿದೆ. ಇದನ್ನು ಹೋಗಲಾಡಿಸಿ ಕಲಿಯುವ ಮನಸ್ಸು ಮಾಡುವಂತೆ ಮಾರ್ಗದರ್ಶನ, ಸರಳ ವಿಧಾನಗಳ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ ಎಂದರು.

ಶಾಲೆಯ ಮುಖ್ಯಶಿಕ್ಷಕ ನೂರೂಲ್ಲಾ ಷರೀಫ್‌ ಮಾತನಾಡಿ, ವಿದ್ಯಾರ್ಥಿಗಲ್ಲಿ ಗಣಿತ ವಿಷಯ ಅರ್ಥವಾಗುವಂತೆ ಪಾಠ ಮಾಡುವ ವಿಧಾನಗಳ ಬಗ್ಗೆ ಸರ್ಕಾರ ಶಿಕ್ಷಕರಿಗೆ ತರಬೇತಿ ನೀಡಿದೆ ಎಂದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ಬಹುಮಾನ ವಿತರಿಸಿದರು. ಅಕ್ಷರ ಫೌಂಡೇಷನ್‌ ಕ್ಷೇತ್ರ ಸಂಯೋಜಕ ಎಸ್‌. ಗೌರಿಶಂಕರ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್‌, ಎಸ್‌ಡಿಎಂಸಿ ಅಧ್ಯಕ್ಷರಾದ ನಾಗಮಣಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !